ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ನಂ 18 ಕಲ್ಪನಾ ಹೌಸ್‌‌‌ನ' 'ವರ' ತೆರೆಗೆ ಸಿದ್ಧ
ಸುದ್ದಿ/ಗಾಸಿಪ್
Feedback Print Bookmark and Share
 
ಚಂದ್ರಶೇಖರ್ ನಿರ್ದೇಶನದ 'ವರ' ಆಕ್ಷನ್-ಥ್ರಿಲ್ಲರ್ ತೆರೆಗೆ ಸಿದ್ಧವಾಗಿದೆ. 2008 ರಲ್ಲಿ ಸೆಟ್ಟೇರಿದ ಅದ್ಧೂರಿ ವೆಚ್ಚದ ಚಿತ್ರಗಳಲ್ಲಿ ಇದೂ ಸಹ ಒಂದೂ. ಈ ಚಿತ್ರವನ್ನು ಡಾ. ಇಬ್ರಾಹಿಂ ನಿರ್ಮಿಸಿದ್ದಾರೆ. 'ಮಿಂಚು' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಜೈ ಆಕಾಶ್ ಚಿತ್ರದ ನಾಯಕ. ಮಾಡೆಲಿಂಗ್ ಅನುಭವವಿರುವ ಮೈಸೂರಿನ ಹುಡುಗಿ ನಿಧಿ ಚಿತ್ರದ ನಾಯಕಿ.

ಚಿತ್ರದ ನಾಯಕ ಮತ್ತು ನಾಯಕಿ ಮೂಲತಃ ಗ್ರಾಮೀಣ ಪ್ರದೇಶದವರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನಗರಕ್ಕೆ ಬಂದಿರುತ್ತಾರೆ. ಪರೀಕ್ಷೆ ಮುಗಿಸಿ ಗ್ರಾಮಕ್ಕೆ ಹಿಂದಿರುವಾಗ ಆಕಸ್ಮಿಕವೊಂದು ಸಂಭವಿಸುತ್ತದೆ. ಭೂಗತ ಜಗತ್ತಿನ ಗಲಾಟೆಯೊಂದರಲ್ಲಿ ನಾಯಕಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ನಂತರ ಆಕೆಯನ್ನು ದುಷ್ಟರಿಂದ ಕಾಪಾಡಲು ನಾಯಕ ಹರಸಾಹಸ ಪಡುತ್ತಾನೆ.

ತನ್ನ ಹುಡುಗಿಯನ್ನು ರಕ್ಷಿಸಿಕೊಳ್ಳುವ ಸಂದರ್ಭದಲ್ಲಿ ಆತ ಎದುರಿಸುವ ಸವಾಲುಗಳ ಸುತ್ತ ನಿರ್ದೇಶಕ ಚಂದ್ರಶೇಖರ್ ಚಿತ್ರಕಥೆ ಹೆಣೆದಿದ್ದಾರೆ. ಸ್ಟಿಲ್ ಕ್ಯಾಮರಾ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದಂತೆ. ಮೂಲಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಅನಂತ್‌ನಾಗ್, ದಿಲೀಪ್‌ರಾಜ್, ಸುಧಾ ಬೆಳವಾಡಿ, ಟೆನ್ನಿಸ್ ಕೃಷ್ಣ ತಾರಾಬಳಗದಲ್ಲಿದ್ದಾರೆ. ಇವರ ನಿರ್ದೇಶನದ ಚೊಚ್ಚಲ ಚಿತ್ರ 'ನಂ 18 ಕಲ್ಪನಾ ಹೌಸ್' ತೆರೆಗೆ ಸಿದ್ಧವಾಗಿದೆ.
MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಧಿ ಜೈ, ಆಕಾಶ್, ವರ, ಚಂದ್ರಶೇಖರ್