ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಾಮಿಡಿಯಲ್ಲೂ ಸೈ ಎನಿಸಿದ ಖಳನಟ ಸತ್ಯಜಿತ್
ಸುದ್ದಿ/ಗಾಸಿಪ್
Feedback Print Bookmark and Share
 
ವರ್ಷದ ಕೊನೆಯಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿರುವ 'ಮಸ್ತ್ ಮಜಾ ಮಾಡಿ' ಚಿತ್ರದಲ್ಲಿ ನಟಿಸಿದ ಸತ್ಯಜಿತ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಖಳಪಾತ್ರಗಳಲ್ಲೇ ಅಬ್ಬರಿಸುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಹಾಸ್ಯಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.

ಖಳಪಾತ್ರಗಳಿಂದ ಬೇಸರವಾಗಿತ್ತು. ಹಾಸ್ಯ ಮಾಡಿ ಪ್ರೇಕ್ಷಕರನ್ನು ನಗಿಸುವ ಕೆಲಸದಲ್ಲಿ ನಮಗೂ ಖುಷಿಯಿರುತ್ತದೆ. ಸಿನಿಮಾನೇ ಬದುಕಾಗಿರುವಾಗ ಯಾವುದೇ ಪಾತ್ರವಾದರೂ ಸೈ ಎನ್ನುತ್ತಾರೆ ಸತ್ಯಜಿತ್. ಮೊನ್ನೆಯಷ್ಟೇ 'ದುಬೈ ಬಾಬು' ಚಿತ್ರೀಕರಣ ಮುಗಿಸಿರುವ ಅವರಿಗೆ ವಿಜಯ್ ನಟನೆಯ 'ತಾಕತ್' ಚಿತ್ರದಲ್ಲಿ ಖಾಸಗಿ ಬಸ್ ಚಾಲಕನ ಪಾತ್ರವಿದೆ.

'ತಾಕತ್' ಚಿತ್ರದ ಬಗ್ಗೆ ಸತ್ಯಜಿತ್ ವಿಶೇಷವಾಗಿ ಮಾತನಾಡುತ್ತಾರೆ. ಹಿಂದೆ 13 ವರ್ಷ ಕೆಎಸ್ಆರ್‌ಟಿಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡಿದ್ದೆ. ಈಗ 'ತಾಕತ್' ಚಿತ್ರದಲ್ಲಿ ಬಸ್ ಡ್ರೈವರ್ ಸೀಟ್ ಮೇಲೆ ಕುಳಿತಾಗ ಹಳೆಯ ದಿನಗಳು ನೆನಪಾಗುತ್ತವೆ ಎಂದು ತಮ್ಮ ಹಿಂದಿನ ಬದುಕನ್ನು ನೆನಪಿಸಿಕೊಳ್ಳುತ್ತಾರೆ. 'ಗಗನಚುಕ್ಕಿ', 'ಭಾಗ್ಯದ ಬಳೆಗಾರ' ಹಾಗೂ 'ತಬ್ಬಲಿ' ಚಿತ್ರದಲ್ಲೂ ನಟಿಸಿದ್ದಾರೆ. ಅಂದಹಾಗೆ ಇವರು ನಟಿಸಿರುವ ಚಿತ್ರಗಳ ಸಂಖ್ಯೆ 450 ದಾಟುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಸ್ತ್ ಮಜಾ ಮಾಡಿ, ಸತ್ಯಜಿತ್, ತಾಕತ್