ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ರಿಕೆಟ್ ಆಧಾರಿತ ಬಾಜಿಯಲ್ಲಿ ಕಾಶೀ ಪುತ್ರ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರರಂಗದಲ್ಲಿ ಕ್ರೀಡೆಯನ್ನು ಆಧರಿಸಿ ಬಂದಿರುವ ಚಿತ್ರಗಳು ಬಹಳಷ್ಟು ಕಡಿಮೆ. ಅದರಲ್ಲೂ ಅಲ್ಲಿನ ಸಮಸ್ಯೆಗಳನ್ನು ಆಧರಿಸಿದ ಚಿತ್ರಗಳು ಬಹಳಷ್ಟು ಕಡಿಮೆ. ಕಿರು ತೆರೆಯಲ್ಲಿರುವ ಶಿಡ್ಲಘಟ್ಟ ಶ್ರೀನಿವಾಸ್ ಇದೀಗ ಕ್ರಿಕೆಟ್ ಬದುಕನ್ನು ಆಧಾರವಾಗಿಟ್ಟುಕೊಂಡು 'ಬಾಜಿ' ಚಿತ್ರ ಮಾಡಿದ್ದಾರೆ.

ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಸಲಾಗಿದ್ದು, ಕ್ಲೈಮ್ಯಾಕ್ಸ್ ಮಾತ್ರ ಮೇಕೆದಾಟುವಿನಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ಶ್ರೀನಿವಾಸ್. ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಆಧರಿಸಿದ ಪ್ರೇಮ ಕಥೆ ಚಿತ್ರದ ಪ್ರಮುಖಾಂಶ. ಹಾಗೆಂದು ಇದು ರಿಮೇಕ್ ಅಲ್ಲ. ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳಲ್ಲಿ ಹೇಗೆ ಬೆಟ್ಟಿಂಗ್ ನಡೆಯುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ.

ಚಿತ್ರದಲ್ಲಿ ಆರು ಹಾಡುಗಳಿದ್ದು, ಚಿಕ್ಕಮಗಳೂರು ಮತ್ತು ಬಂಡೀಪುರದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ನಟ ಕಾಶೀನಾಥ್ ಪುತ್ರ ಅಲೋಕ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಸನದ ಬೆಡಗಿ ರಾಣಿ ಚಿತ್ರದ ನಾಯಕಿ. ನಮ್ಮ ಚಿತ್ರದಲ್ಲಿ ಹೊಸಬರಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಹೊಸಬರಿಗೆ ಅಗಾಧ ಪ್ರತಿಭೆಯಿದ್ದು, ಅವರಿಗೆ ಸೂಕ್ತ ವೇದಿಕೆ ಅಗತ್ಯವಿದೆ ಎನ್ನುತ್ತಾರೆ ಶ್ರೀನಿವಾಸ್. ಬಿ.ಆರ್. ಶಂಕರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಡ್ಲಘಟ್ಟ ಶ್ರೀನಿವಾಸ್, ಬಾಜಿ, ಅಲೋಕ್, ರಾಣಿ