ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 2009ರಲ್ಲಿ ಪ್ರೇಕ್ಷಕರಿಗೆ 'ಉಪ್ಪಿ' ರುಚಿ...
ಸುದ್ದಿ/ಗಾಸಿಪ್
Feedback Print Bookmark and Share
 
ಉಪೇಂದ್ರ ಅನೇಕ ಸೋಲಿನ ಪೆಟ್ಟನ್ನು ತಿಂದ ನಂತರ ವರ್ಷದ ಕೊನೆಯಲ್ಲಿ ಬಂದ ಬುದ್ದಿವಂತ ಚಿತ್ರ ಅವರಿಗೆ ಗೆಲುವನ್ನು ತಂದು ಕೊಟ್ಟು ಮತ್ತೆ ಹಿಂದಿನ ಇಮೇಜಿಗೆ ಮರಳಿಸಿದೆ. ಈ ಗೆಲುವಿನ ಹಿಂದೆ ಉಪೇಂದ್ರರ ಶ್ರಮವಿದೆ. ಹಾಗಾದರೆ ಅವರ ಹಿಂದಿನ ಚಿತ್ರಗಳಲ್ಲಿ ಶ್ರಮವಿರಲಿಲ್ಲವೇ? ಎಂಬ ಪ್ರಶ್ನೆ ಸಹಜ.

ಉಪ್ಪಿಗೆ ರಕ್ತಕಣ್ಣೀರು ಚಿತ್ರದ ನಂತರ ಹೆಚ್ಚು ಖುಷಿ ಕೊಟ್ಟ ಚಿತ್ರವೆಂದರೆ ಅದು ಬುದ್ದಿವಂತ. ಇಲ್ಲಿ ಅವರು ಕೇವಲ ನಟನಾಗಿ ಮಾತ್ರ ಭಾಗವಹಿಸಲಿಲ್ಲ. ನಿರ್ಮಾಣದ ಪ್ರತಿ ಹಂತದಲ್ಲೂ ಜವಾಬ್ದಾರಿ ವಹಿಸಿಕೊಂಡಿದ್ದರು. ಇದರ ನಿರೂಪಣೆ, ಸಂಭಾಷಣೆಯಲ್ಲೂ ಇವರ ಕೈಯಾಡಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮೆಲ್ಲಾ ಚಿತ್ರಗಳಲ್ಲೂ ಸಾಂಘಿಕವಾಗಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ.
MOKSHENDRA



2009 ಉಪೇಂದ್ರ ಪರ್ವವಾಗಬೇಕೆಂಬ ನಿಟ್ಟಿನಲ್ಲಿ ಉಪ್ಪಿ ಮೈಕೊಡವಿಕೊಂಡಿದ್ದಾರೆ. ಅದಕ್ಕೆ ಪೂರ್ವ ಸಿದ್ಧತೆಗಳನ್ನು ಕೂಡಾ ನಡೆಸಿದ್ದಾರೆ. ಪೆನ್ನು ಹಿಡಿದು ಕುಳಿತರೆ ಉಪೇಂದ್ರನೊಳಗಿರುವ ಒಬ್ಬ ಅದ್ಬುತ ಕ್ರಿಯಾಶೀಲ ಬರಹಗಾರ ಎಚ್ಚೆತ್ತುಕೊಳ್ಳುತ್ತಾನೆ. ಆಗ ಸುಂದರ ಹಾಗೂ ವಿಭಿನ್ನವಾದ ಕಥೆ ಮೂಡುತ್ತದೆ.

ಉಪ್ಪಿಗೆ ಕಷ್ಟ ಏನೆಂದು ಗೊತ್ತಿದೆ. ಗೂಡಿನಂಥ ಮನೆಯಿಂದ ತಮ್ಮ 'ಸುಮ್ಮನೆ' ಬಂಗಲೆಗೆ ಬಂದ ಹಾದಿಯ ಅರಿವಿದೆ. ಹೊಸ ವರ್ಷದಲ್ಲಿ ಉತ್ತಮ ನಿರ್ದೇಶನದೊಂದಿಗೆ ಉಪ್ಪಿಯ ರುಚಿಯನ್ನು ಕನ್ನಡ ಪ್ರೇಕ್ಷಕರು ಮತ್ತೆ ಸವಿಯುವಂತಾಗಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಬುದ್ದಿವಂತ