ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಕ್ಷಕರು ಮೆಚ್ಚಿದ ಮಾನಸಿಯ 'ಮೊಗ್ಗಿನ ಮನಸು'
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ ಮೊಗ್ಗಿನ ಮನಸು ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು. ಈಕೆ ನಟನೆ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದರಿಂದಾಗಿ ಮಾನಸಿಯ ಮನಸು ಅರಳಿತು. ಚಿತ್ರರಂಗದಲ್ಲೇ ಉಳಿದು ತನ್ನನ್ನು ಗುರುತಿಸಿಕೊಳ್ಳಬೇಕೆಂಬ ಬಯಕೆ ಮನದಲ್ಲಿ ಕುಡಿಯೊಡೆಯಿತು. ಈಗ ಈಕೆಯ ಕೈಯಲ್ಲಿ ಕೆಲವು ಚಿತ್ರಗಳು ಕೂಡಾ ಇರುವುದರಿಂದ ಬಯಕೆ ಇಮ್ಮಡಿಗೊಂಡಿದೆ.

ಶಿವಮಣಿ, ಹಾಲಿಡೇಸ್, ಬ್ಲ್ಯಾಕ್, ನಾಗವಲ್ಲಿ ಚಿತ್ರಗಳಲ್ಲಿ ಈಕೆ ನಟಿಸಿದ್ದಾಳೆ. ಇವೆಲ್ಲವೂ ಹೊಸ ವರ್ಷದಲ್ಲಿ ತೆರೆಕಾಣಲಿರುವ ಚಿತ್ರಗಳು. ಸಿನಿಮಾ ಅವಕಾಶ ದೊರೆಯುವ ಮುನ್ನ ಈಕೆ ವಠಾರ, ಭೂಮಿ ಮುಂತಾದ ಧಾರಾವಾಹಿಗಳಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು.

ಅಂದ ಹಾಗೆ ಮಾನಸಿಯ ಮನಸಿನಲ್ಲಿ ನಿರ್ದೇಶಕಿಯಾಗುವ ಆಸೆಯೂ ಇದೆ. ಅದಕ್ಕಾಗಿ ಪೂನಾ ಫಿಲ್ಮ್ ಇನ್ಸ್‌ಟ್ಯೂಟ್ ಸೇರುವ ಉದ್ದೇಶವೂ ಈ ಬೆಡಗಿಗಿದೆ.

ಏನೇ ಆಗಲಿ ಹೊಸ ವರ್ಷ ಮಾನಸಿಯ ಭಾಗ್ಯದ ಬಾಗಿಲು ತೆರೆದೀತೇ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾನಸಿ, ಮೊಗ್ಗಿನ ಮನಸು