ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಲ್ಲದರಂತಲ್ಲ 'ಅಂಜದಿರು'...
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಅಂಜದಿರು ಚಿತ್ರಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ, ಮೇಲುಕೋಟೆ ಹಾಗೂ ಚಿಕ್ಕಾಡೆಯಲ್ಲಿ ಚಿತ್ರೀಕರಣ ನಡೆದಿದೆ. ಅಂಜದಿರು ಒಂದು ವಿಭಿನ್ನ ಚಿತ್ರ. ಇದೊಂದು ಮಾಮೂಲು ಚಿತ್ರ ಆಗದಂತೆ ನೋಡಿಕೊಳ್ಳಬೇಕು. ಚಿತ್ರ ಪ್ರೇಕ್ಷಕನಿಗೂ ಹೊಸ ಅನುಭವ ನೀಡಬೇಕು ಎನ್ನುವ ಉದ್ದೇಶ ನಿರ್ಮಾಣದಲ್ಲಿದೆ ಎಂದರು ನಿರ್ಮಾಪಕ ಮುರಳೀಧರ್.

ಕನ್ನಡ ಸಿನಿಮಾದಲ್ಲಿ ರೌಡಿಸಂ, ಒಂದಷ್ಟು ಹಾಡು, ನಗು ಕಾಲೇಜಿನಲ್ಲಿ ಓಡಾಟ, ದುರಂತ ಇಂತಹ ಶೈಲಿಯ ಚಿತ್ರಗಳು ಮಾಮೂಲಿಯಾಗಿವೆ. ಈ ನಿಟ್ಟಿನಲ್ಲಿ ಅಂಜದಿರು ಚಿತ್ರ ತೀರಾ ಭಿನ್ನವಾಗಿದೆ ಎಂದು ವಿಶ್ವಾಸದಿಂದ ಹೇಳಿಕೊಂಡರು ಮುರಳೀಧರ್.

ಚಿತ್ರದಲ್ಲಿ ಪ್ರಶಾಂತ್, ಶುಭಾ ಪೂಂಜಾ, ಆದಿ ಲೋಕೇಶ್, ದ್ವಾರಕೀಶ್, ಅವಿನಾಶ್, ಪದ್ಮಜಾರಾವ್, ಶ್ರೀನಿವಾಸ್ ಮೂರ್ತಿ ಹಾಗೂ ರವಿಕಾಳೆ ನಟಿಸುತ್ತಿದ್ದಾರೆ. ಚಿತ್ರವನ್ನು ಬಾಯ್‌ಫ್ರೆಂಡ್ ಚಿತ್ರ ನಿರ್ದೇಶಿಸಿದ್ದ ಜನಾರ್ದನ್ ನಿರ್ದೇಶಿಸುತ್ತಿದ್ದಾರೆ. ದ್ವಾರಕೀಶ್ ಇಲ್ಲಿ ಮೊದಲ ಬಾರಿಗೆ ಖಳನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸುಂದರ್ ಟಿ.ಬಾಬು ಸಂಗೀತ ನಿರ್ದೇಶಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಂಜದಿರು