ತಾಜ್‌ಮಹಲ್ ಅಶೋಕ್ ನಾಯಕನಟರಾಗಿ ಅಭಿನಯಿಸುವ ಬ್ರೂಸ್ಲಿ ಚಿತ್ರ ಸೆಟ್ಟೇರುವುದು ನಿಶ್ಚಿತವಾಗಿದೆ. ಚಿತ್ರದ ನಿರ್ದೇಶಕರಾದ ಕೃಷ್ಣಸಮರ್ಥ ಫೆಬ್ರುವರಿ 14ರ ಪ್ರೇಮಿಗಳ ದಿನದಂದು ಈ ಚಿತ್ರವನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.
ಕೃಷ್ಣಸಮರ್ಥ 15 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಅನೇಕ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಕೃಷ್ಣಸಮರ್ಥ ಬ್ರೂಸ್ಲಿ ಸಿದ್ಧತೆಯಲ್ಲಿದ್ದರು.
ಬ್ರೂಸ್ಲಿ ಚಿತ್ರದಲ್ಲಿ ಪೂಜಾಗಾಂಧಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ಸುಹಾಸಿನಿ ನಟಿಸಲಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತವಿದ್ದು, ಕೆ.ವಿ. ರಾಜು ಸಂಭಾಷಣೆ ಬರೆದಿದ್ದಾರೆ. ನಾಯಕ ಅಶೋಕ್ ಚಿತ್ರಕ್ಕಾಗಿ ಈಗಲೇ ಪ್ರಾಕ್ಟಿಸ್ ಮಾಡುತ್ತಿದ್ದಾರೆ.