ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಯಾಂಕಾ ರಣ್‌ಬೀರ್‌ಗೆ ಕಿಸ್ ಕೊಡಬೇಕಂತೆ...
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ರಾಕಿ ಚಿತ್ರದ ನಾಯಕಿ ಬಿಯಾಂಕಾ ದೇಸಾಯಿಯ ಹಾಗೂ ಆಕೆಯ ನಟನೆಯ ಬಗ್ಗೆ ಪ್ರಶಂಸೆಯ ಮಾತು ಕೇಳಿಬಂದುವು. ಇದರಿಂದ ಬಿಯಾಂಕಾ ಫುಲ್ ಖುಷಿಯಾಗಿದ್ದಾರೆ. ಮುಂದಿನ ಚಿತ್ರದಲ್ಲಿ ಇದಕ್ಕಿಂತ ಚೆನ್ನಾಗಿ ಡ್ಯಾನ್ಸ್ ಮಾಡಬಲ್ಲೆ ಎನ್ನುತ್ತಾರೆ ಈ ಬೆಡಗಿ.

ಈಕೆಗೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸುವುದೆಂದರೆ ಸ್ವಲ್ಪ ಕಷ್ಟವಂತೆ. ಈವರೆಗೆ ನನಗೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸುವ ಅವಕಾಶ ಸಿಕ್ಕದಿರುವುದು ನನ್ನ ಪುಣ್ಯ. ನಾನೇನಾದರೂ ಚುಂಬನ ದೃಶ್ಯದಲ್ಲಿ ನಟಿಸುವುದಾದರೆ ಅದು ಬಾಲಿವುಡ್‌ನ ದೀಪಿಕಾ ಪಡುಕೋಣೆಯ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಜೊತೆ ಎನ್ನುತ್ತಾ ನಾಚುತ್ತಾರೆ ಬಿಂಕದ ಬಿಯಾಂಕಾ.

ಯೋಗಿ ಚಿತ್ರದಲ್ಲಿ ಯೋಗೀಶ್ ಜೊತೆ , ಗುಲಾಮ ಚಿತ್ರದಲ್ಲಿ ಪ್ರಜ್ವಲ್ ಜೊತೆ ನಟಿಸಿರುವ ಈಕೆಯ ಮುತ್ತಿನ ಕನಸು ಈಡೇರಬೇಕಾದರೆ ಈಕೆಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗಬೇಕು. ಆದರೆ ಆ ಅವಕಾಶ ಕೊಡುವವರು ಯಾರು. ಪರಭಾಷಾ ನಟಿಯರಲ್ಲಿ ಪೂಜಾಗಾಂಧಿ ನಂತರ ಕನ್ನಡದಲ್ಲಿ ನಿಖಿತಾ ಹಾಗೂ ಬಿಯಾಂಕಾ ಇಲ್ಲೇ ನೆಲೆಯೂರುವ ಭರವಸೆ ಮೂಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಯಾಂಕಾ ದೇಸಾಯಿ, ರಣಬೀರ್ ಕಪೂರ್, ರಾಕಿ