ಅದು ಗಾಂಧಿನಗರದ ಗಾಳಿಯ ಪ್ರಭಾವ ಎಂದರೆ ತಪ್ಪಲ್ಲ. ದುಡ್ಡಿದ್ದವರಿಗೆ ಸೆಲ್ಯೂಟ್ ಹೊಡೆಯುವವರು ಇಲ್ಲಿ ಬೇಜಾನ್ ಜನ ಇದ್ದಾರೆ. ಈಗ ಹಂಸಲೇಖಾ ಕೂಡಾ ಇದಕ್ಕೆ ಸೇರಿದ್ದಾರೆ. ಇತ್ತೀಚೆಗೆ ನಡೆದ ಕಬ್ಬಡ್ಡಿ ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖಾ ಬರಲಿಲ್ಲ. ಕಾರಣ ಸಿಂಪಲ್. ಚಿತ್ರತಂಡದೊಂದಿಗೆ ಮಾಡಿಕೊಂಡ ಮುನಿಸು.
ಕಬ್ಬಡ್ಡಿ ಚಿತ್ರ ಮೊದಲಿನಿಂದಲೂ ವಿವಾದ ಸೃಷ್ಟಿಸುತ್ತಲೇ ಬಂದಿದೆ. ಹಿಂದೆ ಇದರ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ಈ ಕಥೆಯನ್ನು ತಮಿಳಿನಲ್ಲಿ ಮಾಡಿದ್ದಾರೆ ಎಂದು ನಿರ್ದೇಶಕರ ನಡುವೆ ವಿವಾದವಾಯಿತು. ಆದರೆ ಈಗ ಮತ್ತೊಂದು ಕಿರಿಕ್ ಆರಂಭವಾಗಿದೆ. ಹೇಳಿ ಕೇಳಿ ಇದು ಹೊಸಬರ ಚಿತ್ರ. ರಂಗಭೂಮಿ ಹಿನ್ನೆಲೆಯಿಂದ ಬಂದ ನರೇಂದ್ರ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹೊಸಬರ ಚಿತ್ರವೆಂದರೆ ತಾತ್ಸಾರ ಜಾಸ್ತಿ.
ಚಿತ್ರಕ್ಕೆ ಸಂಗೀತವೇನೋ ಹಂಸಲೇಖಾ ನೀಡಿದರು. ಆದರೆ ರೀರೆಕಾರ್ಡಿಂಗ್ ಮಾಡಬೇಕಾದರೆ 8 ಲಕ್ಷ ನೀಡಬೇಕೆಂಬ ಷರತ್ತು ಇಟ್ಟರಂತೆ. ಆದರೆ ಈಗಾಗಲೇ ಕೋಟಿಗೂ ಮೀರಿ ಖರ್ಚು ಮಾಡಿರುವ ಕಬ್ಬಡ್ಡಿ ತಂಡಕ್ಕೆ ಅಷ್ಟೊಂದು ಹಣ ನೀಡಲು ಕಷ್ಟವಾಗಿದೆ. ಕೊಂಚ ಕಡಿಮೆ ಮಾಡಿ ಎಂದು ಕೇಳಿದರೂ ಹಂಸ ಒಪ್ಪಲಿಲ್ಲ. ಕೊನೆಗೂ ನಿರ್ದೇಶಕರು ಬೇರೆಯವರಲ್ಲಿ ಕಡಿಮೆ ದುಡ್ಡಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಹಂಸಲೇಖಾ ಮುನಿಸಿಕೊಂಡು ಕ್ಯಾಸೆಟ್ ಬಿಡುಗಡೆಗೆ ಬರಲಿಲ್ಲ. ಗಾಂಧಿನಗರಲ್ಲಿ ಶ್ರೀಮಂತರಿಗೊಂದು ನ್ಯಾಯ...