ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುನೀತ್‌ಗೆ ಜೋಡಿಯಾಗಲಿರುವ ಜೆನಿಲಿಯಾ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಕನ್ನಡಕ್ಕೆ ಮತ್ತೆ ಜೆನಿಲಿಯಾ ಬರುತ್ತಿದ್ದಾರೆ. ಸತ್ಯ ಇನ್ ಲವ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಈ ಬೆಡಗಿ ಈಗ ಪುನೀತ್ ನಾಯಕರಾಗಿರುವ ಚಿತ್ರದಲ್ಲೂ ನಟಿಸಲಿದ್ದಾರೆ. ಇದು ತೆಲುಗಿನ ರೆಡಿ ಚಿತ್ರ ರೀಮೇಕಾಗಿದ್ದು, ಗಜ ಚಿತ್ರದ ನಿರ್ದೇಶಕ ಮಾದೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಜೆನಿಲಿಯಾ ಮೂಲ ಚಿತ್ರದಲ್ಲೂ ಅಭಿನಯಿಸಿದ್ದಳು. ಹಾಗಾಗಿ ಆ ಪಾತ್ರಕ್ಕೆ ಅವರೇ ಸರಿ ಎಂದು ಹೊರಟರಂತೆ ನಿರ್ಮಾಪಕ ಆದಿತ್ಯಬಾಬು. ಆದರೆ ಜೆನಿಲಿಯಾ ಸದ್ಯಕ್ಕೆ ಬೊಮ್ಮರಿಲ್ಲು ಚಿತ್ರದ ಹಿಂದಿ ರೀಮೇಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಮೊದಲು ಆಗೋದಿಲ್ಲ ಎಂದರಂತೆ.

ಸದ್ಯಕ್ಕೆ ಬಿಜಿಯಾಗಿರುವ ಈಕೆ ಫೆಬ್ರುವರಿ-ಮಾರ್ಚ್‌ನಲ್ಲಿ ಬಿಡುವು ಮಾಡಿಕೊಂಡು ಬರುವುದಾಗಿ ತಿಳಿಸಿದ್ದಾರಂತೆ. ಆ ಹೊತ್ತಿಗೆ ಪುನೀತ್ ಕೂಡಾ ರಾಜ್ ಸಿನಿಮಾ ಮುಗಿಸಿರುತ್ತಾರೆ. ಇದರಿಂದಾಗಿ ಆದಿತ್ಯಬಾಬು ಓಕೆ ಎಂದು ಹೇಳಿ ಆಕೆಗೆ ಅಡ್ವಾನ್ಸ್ ಕೊಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆನಿಲಿಯಾ, ಮಾದೇಶ್, ಪುನೀತ್