ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೆಂಪ ಮುಂದಿನ ವಾರ ತೆರೆಗೆ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ ಕೆಂಪ ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಚಿತ್ರಮಂದಿರಗಳು ಸಿಗದ ಕಾರಣ ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ ಬಿಡುಗಡೆ ತಡವಾಗಿದೆ. ಈ 5 ತಿಂಗಳಲ್ಲಿ ಚಿತ್ರಮಂದಿರಕ್ಕಾಗಿ ಬಾಲರಾಜ್ ಹೋರಾಟವನ್ನೇ ಮಾಡಿದ್ದಾರೆ.

ಕೆಂಪ ಚಿತ್ರದಲ್ಲಿ ಮನರಂಜನೆಗೆ ಏನು ಬೇಕೋ ಎಲ್ಲವೂ ಇದೆ ಎನ್ನುತ್ತಾರೆ ಬಾಲರಾಜ್. ಚಿತ್ರದ ಅವಧಿ ಎರಡು ಗಂಟೆ ಮೂವತ್ತಾರು ನಿಮಿಷಗಳಂತೆ. ಚಿತ್ರದ ಅವಧಿ ಸ್ವಲ್ಪ ಜಾಸ್ತಿಯಾದರೂ ಚಿತ್ರ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆಯಂತೆ. ಚಿತ್ರದ ಕ್ಲೈಮ್ಯಾಕ್ಸ್ ಅದ್ಬುತವಾಗಿ ಮೂಡಿಬಂದಿದೆ ಎನ್ನುತ್ತಾರೆ ಬಾಲರಾಜ್.

ಸೆನ್ಸಾರ್ ಸಮಯದಲ್ಲಿ ಗೋಪಿನಾಥಂನ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತವಾದರೂ ಅದಕ್ಕೆ ಸೂಕ್ತ ದಾಖಲೆ ನೀಡಿದ್ದರಿಂದ ಅವು ಓಕೆ ಆಯಿತ್ತಂತೆ. ಕೆಂಪ ಚಿತ್ರ ಕರ್ನಾಟಕದ ವಿತರಣೆಯ ಹಕ್ಕನ್ನು ವಿಎಂಪಿ ಫಿಲಂಸ್‌ನ ಮೋಹನ್‌ದಾಸ್ ಪೈ ಪಡೆದಿದ್ದಾರಂತೆ. ಈ ಚಿತ್ರದಿಂದ ಬಾಲರಾಜ್ ಪುತ್ರನಿಗೆ ಹಾಗೂ ಬಾಲರಾಜ್‌ಗೆ ಉತ್ತಮ ಹೆಸರು ಬರುವುದು ಖಂಡಿತಾ ಎನ್ನುತ್ತಾರೆ ಮೋಹನ್‌ದಾಸ್ ಪೈ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಹಾಡುಗಳನ್ನು ಜನ ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಬಾಲರಾಜ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆನೇಕಲ್ ಬಾಲರಾಜ್, ಸಂತೋಷ್, ಕೆಂಪ