ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಲ್ದಾರ್ ನಿರ್ಮಾಪಕ ಮಾಹಿನ್: ಶಿವಣ್ಣ
ಸುದ್ದಿ/ಗಾಸಿಪ್
Feedback Print Bookmark and Share
 
ಶಿವರಾಜ್‌ಕುಮಾರ್ ಅಭಿನಯದ ನಂದ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಲೀ ಮೆರಿಡಿಯನ್ ಹೊಟೇಲ್‌ನಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೊಂಡಿತ್ತು. ವೇದಿಕೆಯ ಮೇಲೆ ರಾಜಕಾರಣಿಗಳು, ಚಿತ್ರೋದ್ಯಮಿಗಳ ಇದ್ದರು.

ಚಿತ್ರದ ನಿರ್ಮಾಪಕ ಮಾಹೀನ್ ಹುರುಪಿನಿಂದ ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ಮಾಜಿ ಸಚಿವ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್, ಪುಟ್ಟಣ್ಣ, ಬಾಲಣ್ಣ, ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ನಿರ್ದೇಶಕ ಅನಂತರಾಜು ಸಂಗೀತ ನಿರ್ದೇಶಕ ವಿ.ಮನೋಹರ್ ಹಾಜರಿದ್ದರು.

ಇದು ಶಿವರಾಜ್‌ಕುಮಾರ್ ಅವರಿಗೆ ಹೊಸ ಲುಕ್ ನೀಡಲಿದ್ದು, ಇದೊಂದು ವಿಶಿಷ್ಟ ಚಿತ್ರ ಎಂದು ನಿರ್ದೇಶಕ ಅನಂತರಾಜು ಹೇಳಿದರು. ಶಿವರಾಜ್ ಕುಮಾರ್ ಹಾಗೂ ವಿ.ಮನೋಹರ್ ನಿರ್ಮಾಪಕ ಮಾಹೀನ್ ಅವರ ಆದರಾತಿಥ್ಯವನ್ನು ನೆನೆದರು. ಸೆಟ್‌ನಲ್ಲಿ ಎಲ್ಲರಿಗೂ ಬಿರಿಯಾನಿ ಸಿಗುತಿತ್ತು ಎಂದು ಶಿವಣ್ಣ ಹೇಳಿದರೆ, ಮನೆಗೆ ರಾಜಸ್ತಾನಿ ಸ್ವೀಟ್ಸ್ ಕಳಿಸಿಕೊಟ್ಟ ನಿರ್ಮಾಪಕರನ್ನು ಮನೋಹರ್ ಬಾಯ್ತುಂಬ ಹೊಗಳಿದರು. ಮಾಹಿನ್ ದಿಲ್ದಾರ್ ನಿರ್ಮಾಪಕ ಎಂದರು ಶಿವಣ್ಣ.
MOKSHENDRA
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ಕುಮಾರ್, ನಂದ, ಮಾಹೀನ್