ನಟ ವಿಜಯ್ ರಾಘವೇಂದ್ರ ತಂದೆಯಾಗಿದ್ದಾರೆ. ಇದ್ಯಾವುದೇ ಚಿತ್ರದಲ್ಲಿ ಅಲ್ಲ. ಬದಲಾಗಿ ನಿಜ ಜೀವನದಲ್ಲಿ. ಡಿ. 31 ರ ರಾತ್ರಿ ವಿಜಯ್ರಾಘವೇಂದ್ರ ಅವರ ಪತ್ನಿ ಸ್ಪಂದನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ನಡುವೆ ಅವರ ಅಭಿನಯದ ಸಂಗೀತ ಪ್ರಧಾನ ಚಿತ್ರ ಕಾರಂಜಿ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಮಸ್ತ್ ಮಜಾ ಮಾಡಿ ಚಿತ್ರ ಹಿಟ್ ಲಿಸ್ಟ್ ಸೇರಿದೆ. ಇದರಿಂದ 2008 ವಿಜಯ್ ರಾಘವೇಂದ್ರಗೆ ಲಕ್ಕಿ ವರ್ಷ ಎಂದರೆ ತಪ್ಪಲ್ಲ.
ಈ ಬಾರಿ ಗಾಂಧಿನಗರದಲ್ಲಿ ಭವಿಷ್ಯದ ಹೀರೋಗಳ ಸಂಖ್ಯೆ ಹೆಚ್ಚಿದೆ. ದರ್ಶನ್‌ಗೂ ಗಂಡು ಮಗು ಆಗಿದೆ. ಪ್ರೇಮ್-ರಕ್ಷಿತಾ ಜೋಡಿಗೂ ಗಂಡು ಮಗು. ಈಗ ವಿಜಯ್ ರಾಘವೇಂದ್ರ ಅವರಿಗೂ ಗಂಡು ಮಗು ಆಗಿದೆ.