ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇಘನಾ ಸ್ಯಾಂಡಲ್‌ವುಡ್ ಪಯಣ...
ಸುದ್ದಿ/ಗಾಸಿಪ್
Feedback Print Bookmark and Share
 
ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಲ್ ಆಗಿ ಉತ್ತಮ ಹೆಸರು ಗಳಿಸುವ ಆಸೆಯೊಂದಿಗೆ 'ವೆಂಕಟ ಇನ್ ಸಂಕಟ' ಚಿತ್ರದ ನಾಯಕಿ ಮೇಘನಾ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದಾರೆ. ಇವರು ಹುಟ್ಟಿ, ಬೆಳೆದು ಓದಿದ್ದು ಎಲ್ಲವೂ ಅಮೆರಿಕದಲ್ಲೇ. ಆದರೆ ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದು ಮಾತ್ರ ಸ್ಯಾಂಡಲ್‌‌ವುಡ್‌ನಲ್ಲಿ.

ನಾನು ಅಮೆರಿಕ ಪ್ರಜೆಯಾದರೂ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆದವಳು. ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ಅಲ್ಲಿ ನಾನು ಭಾರತೀಯ ಆಚಾರ ವಿಚಾರಗಳನ್ನು ಬಿಂಬಿಸುವಂತಹ ನಾಟಕ, ನೃತ್ಯಗಳನ್ನು ನೀಡುತ್ತಿದ್ದೆ. ಅಲ್ಲಿನ ನನ್ನ ಸ್ನೇಹಿತರಿಗೆ ಭಾರತೀಯ ಸಂಸ್ಕೃತಿಯ ಕುರಿತು ಪಾಠ ಮಾಡುತ್ತಿದ್ದೆ.

ನಾನು ಬೆಂಗಳೂರಿಗೆ ಬಂದು ಅಭಿನಯ ತರಂಗ ಶಾಲೆಯಲ್ಲಿ ಅಭಿನಯ ಕಲಿಯಲು ಸೇರಿಕೊಂಡೆ. ಅಲ್ಲಿಗೆ ನಿರ್ದೇಶಕ ರಮೇಶ್ ಅರವಿಂದ್ ಅವರು ಬಂದಾಗ ನನ್ನನ್ನು ನೋಡಿ ವೆಂಕಟ ಇನ್ ಸಂಕಟ ಚಿತ್ರದ ನಾಯಕಿಯಾಗಿ ಮಾಡಿಕೊಂಡರು ಎಂದು ಚಿತ್ರರಂಗದ ತಮ್ಮ ಎಂಟ್ರಿಯ ಬಗ್ಗೆ ವಿವರಿಸಿದ್ದಾರೆ. ಮೊದಲಿಗೆ ಕ್ಯಾಮರಾ ಎದುರಿಸುವಾಗ ಸ್ವಲ್ಪ ಭಯವಾಯಿತ್ತಾದರೂ ನಂತರ ಕಡಿಮೆಯಾಯಿತು ಎನ್ನುತ್ತಾರೆ ಮೇಘನಾ.

ಗ್ಲ್ಯಾಮರ್ ಪಾತ್ರಗಳ ಬಗ್ಗೆ ಈ ಬೆಡಗಿ ತಮ್ಮದೇ ಆದ ನಿಲುವು ಇಟ್ಟುಕೊಂಡಿದ್ದಾರೆ. ಗ್ಲ್ಯಾಮರ್ ಹಾಗೂ ಎಕ್ಸ್‌‌ಪೋಸಿಂಗ್ ಸಿನಿಮಾ ರಂಗದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾನು ಅಂತಹ ಪಾತ್ರಕ್ಕೆ ಅದರಲ್ಲೂ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವಂತಹ ಪಾತ್ರಗಳಿಗೆ ಓಕೇನಾ ಎಂದು ಯೋಚಿಸಿ ಪಾತ್ರ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಮೇಘನಾ, ಸ್ಯಾಂಡಲ್ವುಡ್, ರಮೇಶ್ ಅರವಿಂದ