ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಾಷಾ ವಿರುದ್ಧ ಮಂಜಣ್ಣ ಗರಂ...
ಸುದ್ದಿ/ಗಾಸಿಪ್
Feedback Print Bookmark and Share
 
ನಮ್ಮ ಮಂಜಣ್ಣ ಮತ್ತೊಮ್ಮೆ ಗರಂ ಆಗಿದ್ದಾರೆ. ಈ ಬಾರಿ ಅವರಲ್ಲಿ ಕನ್ನಡದ ಪ್ರೇಮ ತುಂಬಿದೆ. ಘಜನಿ ಚಿತ್ರವನ್ನು ವಿತರಣೆ ಮಾಡಿದ ಬಹಾರ್ ಫಿಲಂಸ್ ಭಾಷಾ ವಿರುದ್ಧ ಸಿಡಿದೆದ್ದಿದ್ದಾರೆ. ಹಿಂದಿ, ಮರಾಠಿ, ಅಸ್ಸಾಮಿ ಸಿನಿಮಾಗಳು ಈಗಾಗಲೇ ಕನ್ನಡವನ್ನು ನುಂಗಿ ನೀರು ಕುಡಿದಿವೆ. ಈಗ ಕನ್ನಡ ಸಿನಿಮಾಗಳ ತಿಥಿ ಮಾಡಲು ಬರುತ್ತಿವೆ ಎನ್ನುವ ಮಂಜಣ್ಣ, ಅದಕ್ಕೆ ಭಾಷಾನಂತವರು ಬೆಂಬಲ ಕೊಡುತ್ತಾರೆ. ಕನ್ನಡ ಸಿನಿಮಾ ಓಡುವ ಥಿಯೇಟರ್‌ಗಳಲ್ಲಿ ಘಜನಿ ಗರ್ಜನೆ ಕೇಳಿಬರುತ್ತಿದೆ. ಇದೇ ರೀತಿಯಾದರೆ ಕೆ.ಜಿ.ರಸ್ತೆಯಲ್ಲಿ ಸಲ್ಮಾನ್, ಶಾರುಖ್ ಫೋಟೋಗಳು ರಾರಾಜಿಸುತ್ತವೆ. ಹೀಗಾದರೆ ಹೇಗೆ ಎಂದು ಮಂಜಣ್ಣ ಪ್ರಶ್ನಿಸುತ್ತಾರೆ.

ಅಂದ ಹಾಗೆ ಮಂಜಣ್ಣನಿಗೆ 2008 ವರ್ಷ ಅಷ್ಟೊಂದು ಒಳ್ಳೆಯದಲ್ಲ. 2009 ಇವರ ವರ್ಷ ಎಂದು ಜ್ಯೋತಿಷ್ಯರು ಹೇಳಿದ್ದರಿಂದ ಅವರ ಹೆಚ್ಚಿನ ಎಲ್ಲ ಚಿತ್ರಗಳನ್ನು ಈ ವರ್ಷದಲ್ಲೇ ಬಿಡುಗಡೆಗೊಳಿಸುತ್ತಾರಂತೆ. ಒಲವೇ ಜೀವನ ಲೆಕ್ಕಾಚಾರ, ಯೋಗಿ, ನಾನೇ ಬೇರೆ ನನ್ನ ಸ್ಟೈಲೇ ಬೇರೆ, ಮತ್ತೊಂದು ಗಣೇಶ್, ಶಿವಣ್ಣ ಅಭಿನಯದ ಚಿತ್ರಗಳನ್ನು 2009 ರಲ್ಲೇ ಬಿಡುಗಡೆ ಮಾಡುತ್ತಾರಂತೆ.

ಕನ್ನಡ ಚಿತ್ರರಂಗದ ನಿರ್ಮಾಪಕರಲ್ಲಿ ಮಂಜಣ್ಣ ಏಕ ಕಾಲದಲ್ಲಿ 2-3 ಚಿತ್ರಗಳನ್ನು ನಿರ್ಮಿಸುವ ಸಾಮರ್ಥ್ಯವುಳ್ಳ ಶ್ರೀಮಂತ ನಿರ್ಮಾಪಕರು. ಇತ್ತೀಚೆಗೆ ಇವರ ನಿರ್ಮಾಣದ ಲಿಅರಮನೆಳಿ ಚಿತ್ರ ಶತದಿನ ಆಚರಿಸಿತು. ಅಂದಹಾಗೆ ಮಂಜು ನಿರ್ಮಾಣದ ರಾಜ್ಕುಮಾರಿ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಿಖಿತಾ, ಬಾಲಾಜಿ ಹಾಗೂ ರವಿಚಂದ್ರನ್ ನಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಘಜನಿ, ಮಂಜಣ್ಣ, ಭಾಷಾ, ಸಲ್ಮಾನ್