ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಭಯ್ ಚಿತ್ರಕ್ಕೆ ಆರತಿ ಠಾಕೂರ್
ಸುದ್ದಿ/ಗಾಸಿಪ್
Feedback Print Bookmark and Share
 
ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌‌ಗೆ ಹೊಂದಿಕೆಯಾಗುವುದರಿಂದ ಆಕೆಯನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು.

ಆರತಿ ಮೂಲತಃ ಕರ್ನಾಟಕದವರು.ಕುಂದಾಪುರ ತಾಲೂಕಿನ ಗುಲ್ವಾಡಿಯವರೆಗೂ ಅವರ ಕುಟುಂಬದ ಬೇರು ಹಬ್ಬಿಕೊಂಡಿದೆ. ಅಲ್ಲಿನ ಕೊಂಕಣಿ ಮಾತಾಡುವ ಗೌಡ ಸಾರಸ್ವತ ಕುಟುಂಬಕ್ಕೆ ಸೇರಿದವರು. ಈಕೆಯ ತಂದೆ ತಾಯಿ ಅನೇಕ ವರ್ಷ ಶಿವಮೊಗ್ಗದ ಕಾರ್ಪೊರೇಷನ್ ಬ್ಯಾಂಕ್‌‌ನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಶಿವಮೊಗ್ಗದ ವಾಸವಿ ವಿದ್ಯಾಶಾಲೆಯಲ್ಲಿ ಆರತಿ ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರಿದ್ದರು. ಆದರೆ ನಂತರ ಮುಂದುವರಿಸಿದ್ದು ಮಾತ್ರ ಮುಂಬೈಯ ತನ್ನ ಸಂಬಂಧಿಕರ ಮನೆಯಲ್ಲಿ.

ಬಿಕಾಂ ಪದವೀಧರೆ ಆರತಿ ಏರೋಬಿಕ್ಸ್ ಕಲಿತಿದ್ದಾರೆ. ಸಾಂಪ್ರದಾಯಿಕ ನೃತ್ಯ, ಬ್ಯಾಲೆ ನೃತ್ಯಗಳನ್ನು ಅಭ್ಯಾಸಿಸಿದ್ದಾರೆ. ಫಿಟ್ನೆಸ್ ಟೀಚರ್ ಆಗಿಯೂ ಕಾರ್ಯನಿರ್ವಹಿಸಿದ ಅನುಭ ವವಿದೆ. ವಿವಾಹಿತೆಯಾಗಿರುವ ಆರತಿಯ ಪತಿಯ ಹೆಸರು ದೀಪಕ್ ಠಾಕೂರ್. ಮುಂಬೈಯಲ್ಲಿ ಬಿಸಿನೆಸ್ ಮ್ಯಾನ್. ಮಾಚ್ 25, 2006 ರಂದು, ನೋ ಮಾರ್ಕ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 75ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿರುವ ಆರತಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರತಿ, ಅಭಯ್, ದರ್ಶನ್, ಕರ್ನಾಟಕ, ಕುಂದಾಪುರ