ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾಯಕಿ ನಿರೀಕ್ಷೆಯಲ್ಲಿ 'ಭಾಗ್ಯದ ಬಳೆಗಾರ'
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಶಿವರಾಜ್ ಕುಮಾರ್ ನಾಯಕರಾಗಿರುವ ಭಾಗ್ಯದ ಬಳೆಗಾರ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು ಸಾಯಿಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಬಳೆಗಾರ ಚಿತ್ರದಲ್ಲಿ ನಾಯಕ ಮನೆ ಮನೆಗೂ ಹೋಗಿ ಹೆಂಗಳೆಯರ ಬಳೆ ತೊಡಿಸುವಾಗ ಅವರ ಕಷ್ಟ-ಸುಖ ವಿಚಾರಿಸುತ್ತಾನೆ. ಕೈ ತುಂಬಾ ಬಳೆ ತೊಡಿಸಿ ಆನಂದಪಡುತ್ತಾನೆ. ಆದರೆ ಆತನ ವೈಯಕ್ತಿಕ ಬದುಕು ಹೇಗಿರುತ್ತದೆ ಹಾಗೂ ಅಲ್ಲಿನ ಸಂಕಷ್ಟಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಚಿತ್ರದ ಕಥೆ.

ಈಗಾಗಲೇ ರಾಮನಗರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ತಿಂಗಳು ಪೂರ್ತಿ ರೇಷ್ಮೆ ನಗರದಲ್ಲಿ ಚಿತ್ರೀಕರಣ ನಡೆಯುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಅಜಯ್ ಕುಮಾರ್ ಬರೆದಿರುವ ಈ ಕಥೆಯನ್ನು ಸಾಯಿಪ್ರಕಾಶ್ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ಇತ್ತೀಚೆಗೆ ಕಮರ್ಷಿಯಲ್ ಚಿತ್ರಗಳತ್ತ ಹೊರಳಿದ್ದ ನಿರ್ದೇಶಕ ಸಾಯಿಪ್ರಕಾಶ್ ಮತ್ತೆ ಸೆಂಟಿಮೆಂಟ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ.

ತವರಿಗೆ ಬಾ ತಂಗಿ, ಅಣ್ಣತಂಗಿ, ತವರಿನ ಸಿರಿಯಂಥ ಯಶಸ್ವಿ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸಾಯಿಪ್ರಕಾಶ್ ಕೆಲಕಾಲ ಪ್ರೇಮ-ಸಾಹಸ ಕತೆಗಳತ್ತ ಮುಖ ಮಾಡಿದ್ದರು. ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಏಳು ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ಇಳೆಯರಾಜ ಸಂಗೀತ ನೀಡಿದ್ದಾರೆ. ಹಳ್ಳಿ ಭಾಷೆಗೆ ಶಿವಣ್ಣ ಖಂಡಿತಾ ಹೊಂದಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಇರುತ್ತದೆ ಎನ್ನುತ್ತಾರೆ ಸಂಭಾಷಣೆ ಬರೆದಿರುವ ಮಳವಳ್ಳಿ ಸಾಯಿಕೃಷ್ಣ. ಚಿತ್ರಕ್ಕೆ ನಾಯಕಿ ಇನ್ನೂ ನಿಕ್ಕಿಯಾಗಿಲ್ಲ. ಬಹುಶಃ ಕನ್ನಡದ ಹುಡುಗಿ ನಾಯಕಿಯಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ ಕುಮಾರ್, ಭಾಗ್ಯದ ಬಳೆಗಾರ, ಸಾಯಿಪ್ರಕಾಶ್