ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಪ್ರೇಮಾಯಣ'ದ ಟ್ಯಾಕ್ಸಿ ನಂ-1
ಸುದ್ದಿ/ಗಾಸಿಪ್
Feedback Print Bookmark and Share
 
ಟ್ಯಾಕ್ಸಿ ನಂ.1 ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚಿತ್ರವನ್ನು ಪ್ರಭಾಕರ್ ನಿರ್ದೇಶಿಸಿದ್ದಾರೆ. ಹಿಂದೊಮ್ಮೆ ಟ್ಯಾಕ್ಸಿ ಚಾಲಕರಾಗಿದ್ದ ಅವರು ಈಗ ಅದೇ ಹೆಸರಿನ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು ಸಿನಿಮಾ ಹಾಗೂ ಕಿರುತೆರೆಯ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ಈಗ ಈ ಚಿತ್ರದೊಂದಿಗೆ ನಾಯಕ ಹಾಗೂ ನಿರ್ದೇಶಕರಾಗಿದ್ದಾರೆ.

ಈ ಚಿತ್ರದಲ್ಲಿಯೂ ಪ್ರಭಾಕರ್ ಟ್ಯಾಕ್ಸಿ ಚಾಲಕ. ಅನಿವಾಸಿ ಭಾರತೀಯ ಯುವತಿಯೊಬ್ಬಳು ಟ್ಯಾಕ್ಸಿಯಲ್ಲಿ ಪ್ರವಾಸ ಹೊರಡುತ್ತಾಳೆ. ಟ್ಯಾಕ್ಸಿ ಚಾಲಕನ ಗುಣ, ನಡವಳಿಕೆಗಳಿಂದ ಆತನೆಡೆಗೆ ಆಕರ್ಷಿತಳಾಗುತ್ತಾಳೆ. ಆದರೆ ಆತ ಯುವತಿಯ ಪ್ರೀತಿಯನ್ನು ನಿರಾಕರಿಸುತ್ತಾನೆ.ಅದಕ್ಕೂ ಒಂದು ಫ್ಲಾಶ್‌‌ಬ್ಲ್ಯಾಕ್ ಇರುತ್ತದೆ. ಹೀಗೆ ಪ್ರೀತಿ ಎಲ್ಲರನ್ನೂ ಹೇಗೆ ಮೋಸ ಮಾಡುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎನ್ನುತ್ತಾರೆ ಪ್ರಭಾಕರ್.

ಮಲೆನಾಡು, ದಕ್ಷಿಣ ಕನ್ನಡದ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಐದು ಹಾಡುಗಳಿಗೆ ನಟರಾಜ್ ಕಾನಗೋಡು ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ನಿಖಿತಾ ರಾವ್‌‌ಗೆ ಇಲ್ಲಿ ನಾಯಕಿ ಪಟ್ಟ ನೀಡಲಾಗಿದೆ. ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿರುವ ಗೀತಾ ಇಲ್ಲಿ ಎರಡನೇ ನಾಯಕಿ.

ಟ್ಯಾಕ್ಸಿ ಓಡುತ್ತಾ ಎಂಬುದನ್ನು ಮಾತ್ರ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಭಾಕರ್, ದಕ್ಷಿಣ ಕನ್ನಡ, ಮಲೆನಾಡು, ನಟರಾಜ್