ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆದಿತ್ಯ ಪುರಾಣ...
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ ಬಂತು' ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲಿಲ್ಲ. ನಟಿ ರಮ್ಯಾಳ ಅಭಿನಯದ ಬಗ್ಗೆ ಪ್ರಶಂಸೆಗಳು ಕೇಳಿ ಬಂದುವು.

ಪ್ರೀತಿ ಬಂದು ಹೋದ ಮೇಲೆ ಆದಿತ್ಯ ಬಾಬು ನಟನೆಯಿಂದ ದೂರ ಉಳಿದ ನಿರ್ಮಾಣಕ್ಕಿಳಿದರು. ಪರಮೇಶ ಪಾನ್ವಾಲಾ ಎಂದು ಶಿವಣ್ಣನಿಗೆ ಶಾರುಖ್ ಗೆಟಪ್ ನೀಡಿದರೂ ಜನ ಪರಮೇಶನ ಪಾನ್ ಸ್ವೀಕರಿಸಲಿಲ್ಲ. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಪುನೀತ್ ಅವರನ್ನು ನಾಯಕರನ್ನಾಗಿ ಹಾಕಿಕೊಂಡು ತೆಲುಗಿನ ರೆಡಿ ಚಿತ್ರವನ್ನು ರಿಮೇಕ್ ಮಾಡಲು ಸಿದ್ಧರಾಗಿದ್ದರು. ನಾಯಕಿಯಾಗಿ ಜೆನಿಲಿಯಾಳನ್ನು ಕೇಳಿಕೊಂಡಿದ್ದಾರೆ. ಆದರೆ ಅವರು ಬರುತ್ತಾರೋ ಗೊತ್ತಿಲ್ಲ.

ಈ ರೆಡಿಯ ಮೂಲಕ ಆದಿತ್ಯ ಬಾಬು ಇಡಿಯಾಗಿ ಕನ್ನಡ ಚಿತ್ರರಂಗದಲ್ಲಿ ನಿಲ್ಲುತ್ತಾರೋ ಗೊತ್ತಿಲ್ಲ. ಜೆನಿಲಿಯಾ ಈಗ ತೆಲುಗು ಹಾಗೂ ಇತರ ಭಾಷೆಗಳಲ್ಲಿ ಬೇಡಿಕೆಯ ನಟಿ. ಯಾಕೆಂದರೆ ಕೆಲವು ನಾಯಕಿಯರು ಒಂದೆರಡು ದಿನಗಳಲ್ಲಿ ಓಡಿ ಹೋಗುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆದಿತ್ಯ, ಅಂತೂ ಇಂತೂ ಪ್ರೀತಿ ಬಂತು, ಜೆನಿಲಿಯಾ