ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ಟಾರ್‌ ವಾರ್: ಉಪ್ಪಿ- ವಿಜಿ (Upendra | Vijay | Dubai Babu | Thakat | Kannada film)
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು ಈಗ ಕುತೂಹಲದ ವಿಷಯ.

ಉಪೇಂದ್ರ ಅಭಿನಯದ ದುಬೈ ಬಾಬು ಹಾಗೂ ದುನಿಯಾ ವಿಜಯ್ ಅಭಿನಯದ ತಾಕತ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಇಬ್ಬರು ನಾಯಕರು ಕೂಡಾ ಕನ್ನಡದ ಹಾಟ್ ಫೇವರೀಟ್.

MOKSHENDRA
ಉಪ್ಪಿಯ ಬುದ್ದಿವಂತ ಚಿತ್ರ ಯಶಸ್ವಿ ನೂರು ದಿನಗಳ ಪ್ರದರ್ಶನ ಕಂಡಿತ್ತು. ಅಂತೆಯೇ ವಿಜಯ್ ಅಭಿನಯದ ಜಂಗ್ಲಿ ಚಿತ್ರದ ಹಾಡುಗಳು ಭರ್ಜರಿ ಹಿಟ್ ಆಗಿದ್ದಲ್ಲದೇ ಚಿತ್ರ ಕೂಡಾ 50 ದಿನ ಪೂರೈಸಿ ನಿರ್ದೇಶಕರಿಗೆ ಲಾಭ ತಂದು ಕೊಟ್ಟಿತ್ತು.

ಈ ವಾರ ಈ ಇಬ್ಬರು ನಟರ ಎರಡು ವಿಭಿನ್ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ದುಬೈ ಬಾಬು ಚಿತ್ರದಲ್ಲಿ ಉಪೇಂದ್ರ ವಿಶಿಷ್ಟ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಎಲ್ಲೆಡೆ ನಿರೀಕ್ಷೆ ಮೂಡಿದೆ. ವಿಜಯ್ ಅಭಿನಯದ ತಾಕತ್ ಚಿತ್ರದ ಪೋಸ್ಟರ್‌ಗಳು ಕುತೂಹಲ ಸೃಷ್ಟಿಸಿವೆ. ಇಲ್ಲಿ ವಿಜಯ್ ಬಸ್ ಕ್ಲೀನರ್ ಪಾತ್ರವನ್ನು ಮಾಡಿದ್ದಾರೆ. ಯಾವ ಚಿತ್ರಕ್ಕೆ ಪ್ರೇಕ್ಷಕರು ಜೈ ಅನ್ನುತ್ತಾರೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ವಿಜಯ್, ದುಬೈ ಬಾಬು, ತಾಕತ್