ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ರೇಜಿಸ್ಟಾರ್ ಮಗ ಎಂಟ್ರಿ (Ravichandran | Antharyami | Kannada film | Manoj)
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಯುವ ನಟನ ಆಗಮನವಾಗುತ್ತಿದೆ. ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕ್ರೇಜಿಸ್ಟಾರ್ ಎಂದೇ ಗುರುತಿಸಿಕೊಂಡಿರುವ ರವಿಚಂದ್ರನ್ ಮಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ರವಿಚಂದ್ರನ್ ಹಿಂದೆ, ಇನ್ನು ಮುಂದೆ ತಾವು ನಾಯಕ ನಟನಾಗಿ ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಅದರಂತೆ ತಮ್ಮ ಮಗ ಮನೋಜ್‌ನನ್ನು ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಅದಕ್ಕಾಗಿ ಅಂತರ್ಯಾಮಿ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸದ್ಯ ಅವರು ಮಂಜಿನ ಹನಿ ಚಿತ್ರದಲ್ಲಿ ತೊಡಗಿದ್ದಾರೆ. ಇದನ್ನು ಮರು ಚಿತ್ರೀಕರಣ ಮಾಡುತ್ತಿದ್ದಾರೆ. ತಮ್ಮ ಸಹೋದರ ಬಾಲಾಜಿ ಜೊತೆ ಇವರು ನಟಿಸಿದ ರಾಜ್‌ಕುಮಾರಿ ಚಿತ್ರ ಹೇಳದೆ ಕೇಳದಂತೆ ಚಿತ್ರಮಂದಿರಗಳಿಂದ ಎತ್ತಂಗಡಿಯಾಯಿತು. ಈಗ ಮಂಜಿನ ಹನಿಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿಚಂದ್ರನ್, ಕ್ರೇಜಿಸ್ಟಾರ್, ಮನೋಜ್, ಕನ್ನಡ ಸಿನಿಮಾ, ಅಂತರ್ಯಾಮಿ