ಗಾಂಧಿನಗರದಲ್ಲಿ 'ಪೆರೋಲ್'

'
ಪೆರೋಲ್'! ಬಹುಶಃ ಇತ್ತೀಚೆಗೆ ವರುಣ್ ಗಾಂಧಿ ಪ್ರಕರಣದಲ್ಲಿ ಈ ಪದ ಅನೇಕ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತಿತ್ತು. ಈಗ ಪೆರೋಲ್ ಹೆಸರಿನ ಚಿತ್ರವೊಂದು ಕನ್ನಡದಲ್ಲಿ ಬರುತ್ತಿದೆ.ಎಡಿಟಿಂಗ್ ಕ್ಷೇತ್ರದಲ್ಲಿ ದೈತ್ಯ ಹೆಸರಾದ ಸುರೇಶ್ ಅರಸ್ ಈಗ ಚಿತ್ರ ನಿರ್ಮಾಣದತ್ತ ಮನಸ್ಸು ಮಾಡಿದ್ದಾರೆ. ಮಾಸ್ ಚಿತ್ರವನ್ನು ನಿರ್ಮಿಸುವ ಬಯಕೆ ಅವರದ್ದು. ಅದಕ್ಕಾಗಿ ಚಿತ್ರಕಥೆ ಸಿದ್ಧವಾಗಿದೆ. ರಾಜಶೇಖರ್ ಎಂಬವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ 6 ಮಂದಿ ನಾಯಕರಿರುತ್ತಾರೆ. ಅವರಿಗೆ ಇಬ್ಬರು ನಾಯಕಿಯರು. ಸದ್ಯಕ್ಕೆ ಜಾಲಿಡೇಸ್ ಹುಡುಗ ಪ್ರದೀಪ್ ಆಯ್ಕೆಯಾಗಿದ್ದಾನೆ. ನಿರ್ದೇಶಕ ರಾಜಶೇಖರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ನಾನಾ ಪಾಟೇಕರ್ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ. ಕತೆ ಹಿಡಿದುಕೊಂಡು ಹೋಗಿ ಮುಂಬೈಯಲ್ಲಿ ಠಿಕಾಣಿ ಹೂಡಿದ್ದಾರೆ.ನಾನಾ ಏನಾದರೂ ಓಕೆ ಅಂದರೆ ಮುಂದಿನ ತಿಂಗಳೇ ಚಿತ್ರ ಸೆಟ್ಟೇರಲಿದೆಯಂತೆ.