ಬಾಲು ಮತ್ತೆ ಬರುತ್ತಿದ್ದಾರೆ. ಯಾವ ಬಾಲು ಎಂದು ಗೊತ್ತಾಗಿಲ್ವಾ? ಪೂಜಾಗಾಂಧಿ ಅಭಿನಯದ ಅನು ಚಿತ್ರವನ್ನು ನಿರ್ಮಿಸಿ ಅದರಲ್ಲಿ ಸೈಕೋಪಾತ್ ಪಾತ್ರ ಮಾಡಿ ಮೊದಲ ಪ್ರಯತ್ನದಲ್ಲೇ ಮೆಚ್ಚುಗೆ ಗಳಿಸಿದವರೇ ಈ ಬಾಲು.
ಈಗ ಮತ್ತೊಂದು ಚಿತ್ರ ಮಾಡಲು ಹೊರಟ್ಟಿದ್ದಾರೆ. ಅದಕ್ಕೆ ಮೇಸ್ತ್ರಿ ಎಂದು ಹೆಸರಿಟ್ಟಿದ್ದಾರೆ. ಹಾಗಾಂತ ಇದು ಚಿರಂಜೀವಿ ನಟಿಸಿದ ಮುಠಾಮೇಸ್ತ್ರಿ ಚಿತ್ರದ ರೀಮೇಕಲ್ಲ. ಈ ಚಿತ್ರದಲ್ಲಿನ ಮೇಸ್ತ್ರಿಯ ಪಾತ್ರವನ್ನು ಈ ಬಾರಿಯೂ ಬಾಲು ಅವರೇ ಪೋಷಿಸುತ್ತಿದ್ದಾರೆ.
MOKSHENDRA
ನಂದ ನಂದಿತಾ ಚಿತ್ರದ ಜಿಂಕೆ ಮರೀನಾ ಹಾಡಿಗೆ ಸಾಹಿತ್ಯ ಬರೆದ ಆನಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಳೆದ ಬಾರಿ ಅನು ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ ಪೂಜಾಗಾಂಧಿ ಈ ಬಾರಿಯೂ ಮೇಸ್ತ್ರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅನು ಚಿತ್ರಕ್ಕೆ ಕ್ಯಾಮರಾ ಹಿಡಿದ ನಿರಂಜನ ಬಾಬು ಅವರೇ ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ.