ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶ್ರುತಿ-ಮಹೇಂದರ್ ಪ್ರಕರಣ: ಜಯಮಾಲಾ ಪ್ರತಿಕ್ರಿಯೆ (Shruthi, Mahender, Jayamala, Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಶ್ರುತಿ- ಮಹೇಂದರ್ ನಡುವಿನ ಬಿರುಕನ್ನು ಸರಿಪಡಿಸಲು ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಆ ಗಾಳಿ ಸುದ್ದಿಗೆ ಸ್ವತಃ ಜಯಮಾಲಾ ಉತ್ತರಿಸಿದ್ದಾರೆ.

''ನಾನು ಅವರಿಬ್ಬರನ್ನು ಕೂಡಿಸಿ, ಬಾಂಧವ್ಯ ಬೆಸೆಯುವಷ್ಟು ದೊಡ್ಡವಳಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಏಕೆಂದರೆ ಅದು ಅವರ ವೈಯಕ್ತಿಕ ವಿಷಯ'' ಎಂದು ಜಯಮಾಲಾ ಹೇಳಿದ್ದಾರೆ.
MOKSHENDRA

''ಶ್ರುತಿ ಬುದ್ದಿವಂತೆ. ಅವಳಿಗೆ ಬದುಕಿನ ಹಳಿ ತಪ್ಪದಂತೆ ನಿಗಾ ವಹಿಸುವ ಸಾಮರ್ಥ್ಯವಿದೆ. ಮಹೇಂದರ್ ಹಾಗೂ ಆಕೆಯನ್ನು ನಾನು ಆತ್ಮೀಯವಾಗಿ ಬಲ್ಲೆ. ಗಂಡ ಹೆಂಡಿರ ಜಗಳದಿಂದ ಕುಸು ಬಡವಾಗಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಮಗು ಬಗ್ಗೆ ಕಾಳಜಿ ವಹಿಸಬೇಕು. ಇಂದು ಈಕೆ ಎಷ್ಟೇ ಜೋರಾಗಿ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟು ಕೈ ತೊಳೆದುಕೊಳ್ಳಬಹುದು. ಮುಂದೆ ಅದು ಆ ಕಂದಮ್ಮನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಒಮ್ಮೆ ಯೋಚಿಸಬೇಕಿತ್ತು. ಅದಕ್ಕಾಗಿ ಆ ಮಗುವನ್ನು ಮೊದಲು ಕರೆಸಿಕೋ ಎಂದಿದ್ದೆ ಎಂದು ಹೇಳಿದ್ದೆ ಅಷ್ಟೇ'' ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರುತಿ, ಮಹೇಂದರ್, ಜಯಮಾಲಾ, ವಿವಾಹ ವಿಚ್ಛೇದನ