ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೊಂದು ದಾಖಲೆಯತ್ತ ಕಿಶನ್ (Chilldren'e Film | Kishan | C/o Footpath)
ಸುದ್ದಿ/ಗಾಸಿಪ್
Feedback Print Bookmark and Share
 
Kishan
MOKSHENDRA
ಕೇರಾಫ್ ಫುಟ್ಪಾತ್ ಎಂಬ ಯಶಸ್ವಿ ಚಿತ್ರದ ನಂತರ ಮತ್ತೊಂದು ಹೊಸ ದಾಖಲೆ ಬರೆಯಲು ತಯಾರಿ ನಡೆಸುತ್ತಿದ್ದಾರೆ. ಈ ಹಿಂದೆ ಅತ್ಯಂತ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಇವರು, ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಮುಂದಾಗುತ್ತಿದ್ದಾರೆ. ಇವರ್ಯಾರು ಅಂತ ಸ್ವಲ್ಪ ಕ್ಲೂ ಸಿಕ್ಕಿರಬೇಕು. ಅದೇ ಪುಟ್ಟ ಬಾಲಕ, ನಿರ್ದೇಶಕ ಕಿಶನ್. ಕಿಶನ್‌ ಈ ಬಾರಿಯ ನಿರ್ದೇಶನದ ವಿಶೇಷವೇನೆಂದರೆ ಮೂರು ದಕ್ಷಿಣ ಭಾಷೆಗಳಲ್ಲಿ ಚಿತ್ರ ನಿರ್ದೇಶಿಸುವುದು.

ಈ ಚಿತ್ರ ಕೂಡ ಮಕ್ಕಳಿಗೋಸ್ಕರ ಮಾಡುತ್ತಿದ್ದಾರೆ. ಸದ್ಯ ಚಿತ್ರದ ತಾರಾಬಳಗ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಚಿತ್ರಕ್ಕಿನ್ನೂ ಹೆಸರಿಡಬೇಕಷ್ಟೆ. ಚಿತ್ರದ ಚಿತ್ರಕತೆ ಮುಗಿದಿದ್ದು, ಫೈನಲ್ ಟಚ್ಅಪ್ ಕೊಡುವ ಕೆಲಸದಲ್ಲಿ ನಿರ್ದೇಶಕ ಕಿಶನ್ ಮಗ್ನರಾಗಿದ್ದಾರೆ. ಈ ಚಿತ್ರ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಮೂಡಿ ಬರಲಿದೆಯಂತೆ.

ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆಯಂತೆ. ಕಿಶನ್ ತಂದೆ ಶ್ರೀಕಾಂತ್ ಚಿತ್ರ ನಿರ್ಮಿಸುತ್ತಿದ್ದಾರೆ. ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರಬೇಕೆಂದು ಕೆಲ ಬಾಲಿವುಡ್ ನಟರ ಆಯ್ಕೆ ಕೂಡ ನಡೆಯುತ್ತಿದೆಯಂತೆ. ಈ ಕತೆ ಕೇರಾಫ್ ಫುಟ್ಪಾತ್ ಚಿತ್ರಕ್ಕಿಂತ ವಿಭಿನ್ನವಾಗಿದೆಯಂತೆ. ವಿಭಿನ್ನವಾಗಿ ಚಿತ್ರ ಮೂಡಿ ಬರಬೇಕೆಂದು ಹೊಸ ರೀತಿಯ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಎಂದು ಕಿಶನ್ ತಂದೆ ಶ್ರೀಕಾಂತ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಿಶನ್, ಕೇರಾಫ್ ಫುಟ್ಪಾತ್, ಗಿನ್ನಿಸ್ ದಾಖಲೆ, ಮಕ್ಕಳ ಚಿತ್ರ