ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐತಲಕಡಿಯಲ್ಲಿ ನೂರು ಕಲಾವಿದರು! (Bullet Prakash | J G Krishna | Rangayana Raghu | Aithalakadi)
ಸುದ್ದಿ/ಗಾಸಿಪ್
Feedback Print Bookmark and Share
 
Rangayana Raghu
MOKSHENDRA
ಜೆ. ಜಿ. ಕೃಷ್ಣ ನಿರ್ದೇಶನ ಮಾಡುತ್ತಿರುವ ಬುಲೆಟ್ ಪ್ರಕಾಶ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಐತಲಕಡಿ ಚಿತ್ರದ ಮುಹೂರ್ತ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಈ ಮುಹೂರ್ತ ಸಮಾರಂಭಕ್ಕೆ ನಾಯಕರಾದ ದರ್ಶನ್, ಗಣೇಶ್, ಪುನೀತ್ ರಾಜ್‌ಕುಮಾರ್ ಹಾಜರಾಗಿದ್ದರು.

ಈ ಚಿತ್ರದ ವಿಶೇಷತೆಯೇನೆಂದರೆ ಸುಮಾರು ನೂರು ಕನ್ನಡ ಚಿತ್ರರಂಗದ ಕಲಾವಿದರು ನಟಿಸುತ್ತಿದ್ದಾರೆ. ಇದರಲ್ಲಿ ಕನ್ನಡದ ಆರು ನಾಯಕ ನಟರು ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಶಿವರಾಜ್ ಕುಮಾರ್ ಒಂದು ಹಾಡಿನಲ್ಲಿ ಕುಣಿಯಲಿದ್ದಾರಂತೆ. ಐತಲಕಡಿ ಚಿತ್ರದ ಕತೆ ಏನೆಂದರೆ ಚಿತ್ರರಂಗದಲ್ಲಿ ಮುಂದೆ ಸಾಗಲು ಯಾರಾದರು ಗಾಡ್ ಫಾದರ್ ಬೇಕಾಗುತ್ತಾನೆ ಎಂಬುದೇ ಚಿತ್ರದ ಕಾನ್ಸೆಪ್ಟ್.. ರಂಗಾಯಣ ರಘು ನಿರ್ದೇಶಕರಾದರೆ ಬುಲೆಟ್ ಪ್ರಕಾಶ್ ಅವರ ಸಹಾಯಕ ನಿರ್ದೇಶಕರಾಗಿ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ನೀತು ಪ್ರಮುಖ ಪಾತ್ರ ವಹಿಸುತ್ತಿದ್ದರು, ಇದರಲ್ಲಿ ಅವರು ಯಾರಿಗೂ ನಾಯಕಿಯಲ್ಲ. ಚಿತ್ರದಲ್ಲಿ ಹಾಸ್ಯ ಮತ್ತು ಆಕ್ಷನ್ ಇದೆಯಂತೆ. ಚಿತ್ರರಂಗದ ಚರಿತ್ರೆಯನ್ನು ಚಿತ್ರದ ಮೊದಲ ಭಾಗದಲ್ಲಿ ತೋರಿಸಲಾಗುತ್ತದೆ. ಚಿತ್ರರಂಗದ ಅಮೃತಮಹೋತ್ಸವದ ಸಂದರ್ಭಕ್ಕೆ ಈ ಚಿತ್ರ ಕೊಡುಗೆಯಾಗಬೇಕು ಎಂಬುದೇ ನಿರ್ದೇಶಕ ಕೃಷ್ಣ ಅವರ ಆಶಯವಂತೆ. ಅಮೃತ ಮಹೋತ್ಸವದ ಕುರಿತಾದ ಒಂದು ಹಾಡನ್ನು ಚಿತ್ರದಲ್ಲಿ ಮಾಡಲಾಗಿದೆಯಂತೆ. ಸುಮಾರು ಮೂವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅನುಭವವನ್ನು ಪಡೆದು ಈ ಚಿತ್ರ ಮಾಡಿದ್ದೇನೆ. ಚಿತ್ರ ಗೆದ್ದೇ ಗೆಲ್ಲಿತ್ತದೆ ಎಂಬ ಆತ್ಮ ವಿಶ್ವಾಸ ನನಗಿದೆ ಅಂತಾರೆ ನಿರ್ದೇಶಕ ಕೃಷ್ಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆ ಜಿ ಕೃಷ್ಣ, ರಂಗಾಯಣ ರಘು, ಶಿವರಾಜ್ ಕುಮಾರ್, ಬುಲೆಟ್ ಪ್ರಕಾಶ್