ತೆರೆ ಮೇಲೆ ಕಬಡ್ಡಿ ಆಟ

ನರೇಂದ್ರ ಬಾಬು ನಿರ್ದೇಶನದ ಕಬಡ್ಡಿ ಚಿತ್ರಕ್ಕೆ ಅಂತೂ ಇಂತೂ ಬಿಡುಗಡೆ ಭಾಗ್ಯ ದೊರೆತಿದೆ. ಎಲ್ಲಾ ಆಂದುಕೊಂಡಂತೆ ಆಗಿದ್ದರೆ ಎರಡು ವರ್ಷದ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ನಿರ್ದೇಶಕ ನರೇಂದ್ರ ಬಾಬು ಮತ್ತು ನಿರ್ಮಾಪಕ ಕಿಶೋರ್ ನಡುವೆ ಸಣ್ಣ ಮನಸ್ತಾಪ ಎದ್ದಿತ್ತು. ಇವರ ಮನಸ್ತಾಪಕ್ಕೆ ಈಗ ಮಂಗಳ ಹಾಡಿದ್ದಾರೆ. ಇತ್ತೀಚೆಗೆ ಗ್ರೀನ್ ಹೌಸಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ತಮ್ಮ ಮನಸ್ಥಾಪ ಮರೆತು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಬಡ್ಡಿ ಚಿತ್ರ ಇನ್ನೆರಡು ವಾರದಲ್ಲಿ ಬಿಡುಗಡೆಯಾಗಲಿದೆಯಂತೆ. ಚಿತ್ರಕ್ಕೆ ಸೆನ್ಸಾರ್ ಕೂಡ ಆಗಿದೆಯಂತೆ. ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ ಎಂದು ಭರವಸೆಯಿಂದ ಹೇಳಿಕೊಳ್ಳುತ್ತಿದ್ದಾರೆ ನಿರ್ದೇಶಕ ನರೇಂದ್ರ ಬಾಬು. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಆಧರಿಸಿ ಚಿತ್ರಕತೆ ಬರೆದಿದ್ದೇನೆ. ಕಬಡ್ಡಿ ನಮ್ಮ ನೆಲದ ಆಟ. ಈ ಆಟಕ್ಕೆ ಕರ್ನಾಟಕದಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಎಂಬುದು ಇತ್ತೀಚೆಗೆ ಗದಗ್‌ನಲ್ಲಿ ನಡೆದ ಕಬಡ್ಡಿ ಆಟವೇ ಸಾಕ್ಷಿ. ಜನಕ್ಕೆ ಈ ಆಟದ ಬಗ್ಗೆ ತುಂಬಾ ಪ್ರೀತಿ ಇದೆ. ಅದೇ ರೀತಿ ಚಿತ್ರವನ್ನೂ ಜನ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಕನ್ನಡದ ಚಕ್ ದೆ ಇಂಡಿಯಾ ಮತ್ತು ಲಗಾನ್ ತರ ಆಗುತ್ತೆ ಎಂಬ ನಂಬಿಕೆ ಇದೆ ಎಂದರು ಬಾಬು.