ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಾಗ್ಯದ ಬಳೆಗಾರ ಬರಲಿದ್ದಾನೆ (Bhagyada Balegara | Om SaiPrakash | Shivaraj Kumar | Navya)
ಸುದ್ದಿ/ಗಾಸಿಪ್
Feedback Print Bookmark and Share
 
Bhagyada Balegara
MOKSHENDRA
ಓಂ ಸಾಯಿಪ್ರಕಾಶ್ ನಿರ್ದೇಶನದ ಭಾಗ್ಯದ ಬಳೆಗಾರ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ಮುಕ್ತಾಯವಾಗಿದೆ. ಚಿತ್ರಕ್ಕೆ ಪ್ರಸಾದ್ ರೆರ್ಕಾಡಿಂಗ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಮಾಡಲಾಗಿದೆ.

ದಕ್ಷಿಣ ಭಾರತದಲ್ಲೇ ಖ್ಯಾತಿ ಹೊಂದಿರುವ ಇಳಯರಾಜ ಅವರ ಸಂಗೀತ ಈ ಚಿತ್ರದಲ್ಲಿದೆ. ಇವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಮಧುರವಾಗಿದೆ ಮತ್ತು ಅವರೇ ಮಾಡಿದ ಹಿನ್ನಲೆ ಸಂಗೀತ ಕೂಡ ಉತ್ತಮವಾಗಿ ಮೂಡಿ ಬಂದಿದೆ ಅಂತಾರೆ ನಿರ್ದೇಶಕ ಓಂ ಪ್ರಕಾಶ್.

ಇದೊಂದು ಗ್ರಾಮೀಣ ಸೊಗಡಿನ ಕಥೆಯಾದರಿಂದ ಚಿತ್ರೀಕರಣವನ್ನು ಅದೇ ರೀತಿಯಲ್ಲಿ ಮಾಡಲಾಗಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕನಾದರೆ ನವ್ಯಾ ನಾಯಕಿಯಾಗಿ ಸಾತ್ ನೀಡಿದ್ದಾರೆ. ರಮೇಶ್ ಕಶ್ಯಪ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಆದಿ ಲೋಕೇಶ್, ಸತ್ಯಜಿತ್ , ಅಮೃತ, ಪದ್ಮವಾಸಂತಿ, ಸುಧಾ ಬೆಳವಾಡಿ ಮುಂದಾದವರ ತಾರಾ ಬಳಗವಿದೆ. ಚಿತ್ರ ಸದ್ಯ ಬಿಡುಗಡೆಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾಗ್ಯದ ಬಳೆಗಾರ, ಓಂ ಸಾಯಿಪ್ರಕಾಶ್, ಶಿವರಾಜ್ ಕುಮಾರ್, ನವ್ಯಾ