ಚಿತ್ರಗಳಲ್ಲಿ ಪ್ರಾಣಿಗಳನ್ನು ಬಳಸುವುದನ್ನು ನಿಷೇಧಿಸಿ ವರುಷವೇ ಕಳೆಯಿತು. ಗಂಧದ ಗುಡಿಯಂತಹ ಐತಿಹಾಸಿಕ ಚಿತ್ರಗಳ ಯಶಸ್ಸಿಗೆ ಪ್ರಾಣಿಗಳ ಕರಾಮತ್ತೂ ಕಾರಣವಾಗಿದೆ ಎಂದರೆ ತಪ್ಪಲ್ಲ. ಇನ್ನೇನಿದ್ದರೂ ಪ್ರಾಣಿಗಳನ್ನು ಬಳಸುವಂತಿಲ್ಲ ಬಿಡಿ. ಆದರೆ ಇತ್ತೀಚಿನ ಚಿತ್ರಗಳಿಗೆ ಪ್ರಾಣಿಗಳ ಹೆಸರನ್ನೂ ಇಡುವ ಸಾಹಸಕ್ಕೆ ಕೆಲ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ.
ಈ ಹಿಂದೆಯೇ ದರ್ಶನ್ ಅವರ ಗಜ ಹೆಸರಿನ ಚಿತ್ರ ಬಹುತೇಕ ಯಶಸ್ಸು ಕಂಡಿತು. ಅದೇ ಯಶಸ್ಸು ನಿರ್ಮಾಪಕರಾದ ಮಾದೇಶ್ ಅವರಿಗೆ ಈ ಚಿತ್ರವನ್ನು ನಿರ್ಮಿಸಲು ಉತ್ತೇಜನ ನೀಡಿದೆ. ತಮ್ಮ ಮೊದಲ ಚಿತ್ರ ಪ್ರಾಣಿಯೊಂದರ ಹೆಸರಿನಿಂದಾಗಿ ಖ್ಯಾತಿ ಪಡೆದಿದ್ದು, ಇದೇ ಉದ್ದೇಶದಿಂದ ಕರಿಚಿರತೆ ಎಂಬ ಹೆಸರಿಟ್ಟಿದ್ದಾರೆ.
ವಿಜಯ್ ತನ್ನ ತಾಕತ್ ಪ್ರದರ್ಶಿಸಿ ಇದೀಗ ಕರಿ ಚಿರತೆಯಾಗಿ ಗರ್ಜಿಸಲು ತಯಾರಿ ನಡೆಸುತ್ತಿದ್ದಾರೆ. ಹೆಸರಿಗೂ ಆ ಚಿತ್ರದಲ್ಲಿನ ನಟನಿಗೂ ಏನಾದರು ಸಂಬಂಧವಿದೆಯೇ ಚಿತ್ರ ಬಿಡುಗಡೆಗೊಂಡ ಬಳಿಕವೇ ಹೇಳಬೇಕು.
ಕಟ್ಟು ಮಸ್ತಾದ ವಿಜಯ್ ದೇಹವನ್ನು ಗಮನದಲ್ಲಿರಿಸಿಕೊಂಡು ಈ ಚಿತ್ರವನ್ನು ನಿರ್ಮಾಪಕರು ನಿರ್ಮಿಸುತ್ತಿದ್ದಾರೆ ಎಂಬ ಗುಮಾನಿಯೂ ಇದೆ. ಶರ್ಮಿಳಾ ಮಾಂಡ್ರೆ ಈ ಚಿತ್ರದ ನಾಯಕಿ.