ಹೀಗೆಂದವರು ಬೇರಾರೂ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗಾಸಿಪ್‌ಗಳಿಗೆ ಕಾರಣರಾದ ವಿಜಯ್-ಶುಭಾ ಪೂಂಜಾ ಜೋಡಿ. ಹೌದು. ಇತ್ತೀಚೆಗೆ ಶಿವಮೊಗ್ಗದ ಜ್ಯೋತಿಷ್ಯರೊಬ್ಬರ ಮನೆಯಲ್ಲಿ ಇವರಿಬ್ಬರು ಮದುವೆಯಾಗಿ, ದೇವರ ಫೋಟೋ ಮುಂದೆ ನಿಂತು ತೆಗೆಸಿಕೊಂಡ ಚಿತ್ರ ಮಾಧ್ಯಮದವರೆಗೂ ತಲುಪಿತ್ತು.
ಆದರೆ ಇದೀಗ ಈ ಮಾತನ್ನು ಅವರಿಬ್ಬರು ಒಪ್ಪಲು ಸಿದ್ಧರಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎನ್ನುತ್ತಾರೆ ಶುಭಾ. ನಾವಿಬ್ಬರೂ ಬೆಸ್ಟ್ ಫ್ರೇಂಡ್ಸ್ ಅಷ್ಟೇ. ಫ್ರೆಂಡ್ಸ್ ಎಲ್ಲೂ ಹೋಗಬಾರದಾ ಎಂದು ಪ್ರಶ್ನಿಸುವ ಶುಭಾ ಪೂಂಜಾ, ನಾವಿಬ್ಬರೂ ಸೆಲೆಬ್ರೆಟಿ ಎನ್ನುವ ಕಾರಣಕ್ಕೆ ಮಾಧ್ಯಮಗಳು ಈ ರೀತಿ ಮಾತನಾಡುತ್ತಿವೆ. ಒಂದು ವೇಳೆ ನಮ್ಮಿಬ್ಬರ ನಡುವೆ ಏನಾದರೂ ನಡೆದರೆ ಎಲ್ಲರಿಗೂ ತಿಳಿಸುತ್ತೇನೆ ಎನ್ನುತ್ತಾರೆ ಶುಭಾ ಪೂಂಜಾ.
ಎಸ್. ನಾರಾಯಣ ಅವರ ಚಂಡ ಚಿತ್ರದಿಂದ ಮೊದಲ್ಗೊಂಡು ತಾಕತ್ತು ಚಿತ್ರದವರೆಗೂ ಎಲ್ಲಾ ಕಡೆಯೂ ಇದೇ ಮಾತಾಗಿತ್ತು. ಇವರಿಬ್ಬರು ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಾಗಿ ಕಾರಿನಲ್ಲಿ ಕುಳಿತಿರುತ್ತಾರೆ ಎನ್ನುವ ಕಾರಣಕ್ಕಾಗಿಯೇ ಎಸ್. ನಾರಾಯಣ ಮುನಿಸಿಕೊಂಡಿದ್ದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಮತ್ತೆ ಮದುವೆ ಫೋಟೋ ಚಿತ್ರರಂಗದಲ್ಲಿ ಸದ್ದು ಮಾಡಿದೆ.
ವಿಜಯ್ ಹೇಳುವುದಿಷ್ಟೆ. ದಯವಿಟ್ಟು ಇನ್ನು ಮುಂದೆ ಶುಭಾ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಶ್ನೆ ಕೇಳಬೇಡಿ. ಇವೆಲ್ಲಾ ಸುಳ್ಳು ಎನ್ನುತ್ತಾರೆ. ಹಾಗಾದರೆ ನಿಜ ಯಾವುದು?