ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾಹಸ ದೃಶ್ಯದಲ್ಲಿ ವಿನೋದ್ (Vinod Prabhakar | Hori | Navagraha | Marubhumi)
ಸುದ್ದಿ/ಗಾಸಿಪ್
Feedback Print Bookmark and Share
 
Vinod Prabhakar
MOKSHENDRA
ನಟ ವಿನೋದ್ ಪ್ರಭಾಕರ್ ಅವರಿಗೆ ಸಾಹಸ ಸನ್ನಿವೇಶದಲ್ಲಿ ಪಾಲ್ಗೊಳ್ಳುವುದೆಂದರೆ ಅಚ್ಚುಮೆಚ್ಚು. ಅದು ತಂದೆಯಿಂದ ಬಳುವಳಿ ಎಂದರೂ ತಪ್ಪಾಗಲಾರದು.

ತಮ್ಮ ಹಲವು ಚಿತ್ರಗಳಿಗೇ ಡ್ಯೂಪ್ ಇಲ್ಲದೇ ಸಾಹಸ ಮಾಡುತ್ತಾರೆ. ಹೋರಿ ಚಿತ್ರದಲ್ಲಿ ನವೀರೇಳಿಸುವ ಸಾಹಸದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಭೇಷ್ ಎನಿಸಿಕೊಂಡಿರುವ ವಿನೋದ್ ಪ್ರಭಾಕರ್, ಇದೀಗ ಹೋರಿ ನಿರ್ಮಾಪಕರ ಮತ್ತೊಂದು ಚಿತ್ರದಲ್ಲಿ ನಾಯಕನಾಗುತ್ತಿದ್ದಾರೆ.

ನವಗ್ರಹ ಚಿತ್ರ ತಮಗೊಂದು ಬ್ರೇಕ್ ನೀಡಿದೆ ಎನ್ನುತ್ತಾರೆ ವಿನೋದ್. ತಿಂಗಳ ಹಿಂದೆ ಫೈಟ್ ಸನ್ನಿವೇಶವೊಂದರಲ್ಲಿ ಮೊಣಕೈ ಮೇಲೆ ಗಾಯಗೊಂಡಾಗ ಫೈಟ್ ಮಾಸ್ಟರ್ ಚಿನ್ನಯ್ಯ ಬಲಪ್ರಯೋಗ ಮಾಡಿ ಅವರೇ ತಿರುಚಿದ್ದ ಮೂಳೆ ಸರಿಪಡಿಸಿದ್ದನ್ನು ವಿನೋದ್ ಅಚ್ಚರಿಯಿಂದ ಹೇಳುತ್ತಾರೆ. ಇಲ್ಲದಿದ್ದರೆ ಮೂರು ತಿಂಗಳು ಆಸ್ಪತ್ರೆಯಲ್ಲಿರಬೇಕಿತ್ತಂತೆ.

ಅದೆಲ್ಲಾ ಹಾಗಿರಲಿ. ಇದೀಗ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧವಾಗುತ್ತಿರುವ ಪಾಲೈ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ಚಿತ್ರಕ್ಕೆ ಮರುಭೂಮಿ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಕನ್ನಡದಲ್ಲಿ ತಂದೆಯ ಸ್ಥಾನವನ್ನು ತುಂಬಲು ವಿನೋದ್ ಪ್ರಭಾಕರ್ ಸಿದ್ಧತೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿನೋದ್ ಪ್ರಭಾಕರ್, ಹೋರಿ, ಸಾಹಸ, ನವಗ್ರಹ, ಮರುಭೂಮಿ