ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶುಭಾ, ದಿಗಂತ್‌ರ ಪುತ್ರ (Diganth | Shubha Punja | Putra | V Umakanth)
ಸುದ್ದಿ/ಗಾಸಿಪ್
Feedback Print Bookmark and Share
 
Shubha Punja
MOKSHENDRA
ತಮಿಳಿನ ಸೂಪರ್ ಹಿಟ್ ಚಿತ್ರ ಎಮ್ಟನ್ ಮಗನ್ ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೆ ಚಿತ್ರಕ್ಕೆ ಇನ್ನೂ ಹೆಸರಿಟ್ಟಿರಲಿಲ್ಲ. ಈಗ ಚಿತ್ರಕ್ಕೆ ಪುತ್ರ ಎಂದು ನಾಮಕರಣ ಮಾಡಲಾಗಿದೆ.

ಅನುರಾಗ ಸಂಗಮ, ಮದುವೆ, ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ ಇನ್ನೂ ಹಲವು ಚಿತ್ರ ನಿರ್ದೇಶನ ಮಾಡಿ ಅನುಭವವಿರುವ ವಿ. ಉಮಾಕಾಂತ್ 'ಪುತ್ರ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ದಿಗಂತ್ ಕಾಣಿಸಿಕೊಂಡರೆ ನಾಯಕಿಯಾಗಿ ಶುಭಾ ಪೂಂಜಾ ನಟಿಸುತ್ತಿದ್ದಾರೆ. ಪುತ್ರ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಸರ್ಜಾಪುರ ಬಳಿ ಇರುವ ಶ್ರೀರಾಮ ದೇವಸ್ಥಾನದಲ್ಲಿ ನಡೆದಿದೆ.

Diganth
MOKSHENDRA
ಜೋಸೆಫ್ ಮತ್ತು ಅಂತೋನಿ ಪಾಲ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಉಮಾಕಾಂತ್ ಚಿತ್ರಕತೆ ಬರೆದು ಸಂಭಾಷಣೆಯನ್ನೂ ಬರೆದಿದ್ದಾರೆ. ಇದೊಂದು ತಂದೆ ಮಗನ ನಡುವೆ ಎಂಥಾ ಅವಿನಾಭಾವ ಸಂಬಂಧವಿರುತ್ತದೆ ಎಂದು ಹೇಳುವ ಚಿತ್ರ. ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಳ್ಳುತ್ತೆದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಮತ್ತೊಂದು ವಿಶೇಷವೆಂದರೆ ತಮಿಳಿನ ಸಂಗೀತ ನಿರ್ದೇಶಕರಾದ ವಿದ್ಯಾಸಾಗರ್ ಪುತ್ರ ಚಿತ್ರದ ಸಂಗೀತ ನಿರ್ದೇಶಕರು. ಆದಷ್ಟು ಬೇಗ ಚಿತ್ರದ ಚಿತ್ರೀಕರಣ ಮಾಡಿ ಮುಗಿಸಲು ಉಮಾಕಾಂತ್ ನಿರ್ಧರಿಸಿದ್ದಾರೆ. ಚಿತ್ರದಲ್ಲಿ ಮಾಳವಿಕ, ಸುಂದರರಾಜ್, ಟೆನ್ನಿಸ್ ಕೃಷ್ಣ ಇನ್ನೂ ಮುಂತಾದವರ ದೊಡ್ಡ ತಾರಾಬಳಗವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಗಂತ್, ಶುಭಾ ಪೂಂಜಾ, ಪುತ್ರ, ವಿ ಉಮಾಕಾಂತ್