ಚಮಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ನಿರ್ದೇಶಕರಾದ ಎ.ಆರ್. ಬಾಬು ಖುಷಿಯಲ್ಲಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿರುವುದಕ್ಕೆ ಸಂತಸಗೊಂಡಿದ್ದಾರೆ. ಅಲ್ಲದೆ, ಚಿತ್ರದಲ್ಲಿ ಬರುವ ಹಾಸ್ಯ ಸನ್ನಿವೇಶಗಳನ್ನು ಮಂಡಳಿ ಪ್ರಶಂಸಿದೆ ಎಂದು ಹೇಳುತ್ತಾರೆ ಅವರು.
ಚಿತ್ರವನ್ನು ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ದೇಶಕರು ನಿಶ್ಚಯಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಇದು ಬಾಬು ಅವರ 25ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮಿ. ಗರಗಸ ಹೀರೋ ಕೋಮಲ್ ಚಿತ್ರದ ನಾಯಕ. ಇವರೊಂದಿಗೆ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೋಮಲ್‌ಗೆ ನಾಯಕಿಯಾಗಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ನೊಂದ ಹೃದಯಿಗಳಿಗೆ ಮುದ ನೀಡುವ ಚಿತ್ರ ಇದಾಗಿದ್ದು, ನಿರ್ಮಾಪಕರಾದ ಅನುಸೂಯ ಮತ್ತು ಜೀವನ್ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಪ್ರೇಕ್ಷಕರು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದಕ್ಕೆ ಮುಂದಿನ ತಿಂಗಳವರೆಗೆ ಕಾಯಬೇಕಿದೆ.