ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಕೆಗೆ ಆತ್ಮವಿಶ್ವಾಸ ಸ್ವಲ್ಪ ಜಾಸ್ತಿ! (Ganda Hendathi | Shloka | E Sanje | Sanjana)
ಸುದ್ದಿ/ಗಾಸಿಪ್
Feedback Print Bookmark and Share
 
Sanjana
MOKSHENDRA
ಗಂಡ ಹೆಂಡತಿ ಚಿತ್ರದಲ್ಲಿ ತಮ್ಮ ಬಿಂದಾಸ್ ಆಗಿ ನೈಜ ಅಭಿನಯವನ್ನು ಪ್ರದರ್ಶಿಸಿ ಇಡೀ ಗಾಂಧಿನಗರವನ್ನೇ ಬೆಚ್ಚಿ ಬೀಳಿಸಿ ಎಲ್ಲರ ಮನೆ ಮಾತಾದ ಗ್ಲಾಮರಸ್ ಗೊಂಬೆ ಸಂಜನಾ. ಈಕೆ ಈಗ ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ.

ಸಂಜನಾ ಸದ್ಯ ಕನ್ನಡದಲ್ಲಿ ಶ್ಲೋಕ ಮತ್ತು ಈ ಸಂಜೆ ಅನ್ನೋ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಂಜೆ ಚಿತ್ರದಲ್ಲಿ ಆರ್ಯ ಹೆಸರಿನ ಹೊಸ ನಾಯಕನಿಗೆ ನಾಯಕಿಯಾಗಿ ಸಾತ್ ನೀಡುತ್ತಿದ್ದಾರೆ. ಶ್ಲೋಕದಲ್ಲಿ ಇವರೇ ಹೀರೋಯಿನ್ ಅನ್ನೋದು ಪಕ್ಕಾ ಆಗಿದೆ. ಹಾಗೆ ತೆಲುಗಿನಲ್ಲಿ ಅರ್ಜುನ್ ರೆಡ್ಡಿ ನಿರ್ದೇಶನದ ಸಮರ್ಧುಡು ಚಿತ್ರದಲ್ಲಿ ನಾಯಕ ರಾಜ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಹಾಗೆ ಸಂಜನಾಗೆ ತಮ್ಮ ಬಗ್ಗೆ ಆತ್ಮವಿಶ್ವಾಸ ಸ್ವಲ್ಪ ಜಾಸ್ತಿ. ಏಕೆಂದರೆ ನಾಯಕಿಯರ ಪಟ್ಟಿಯಲ್ಲಿ ತಮಗೆ ಯಾವ ಸ್ಥಾನ ಸಿಗಬಹುದು ಎಂಬ ಪ್ರಶ್ನೆಗೆ ನನ್ನನ್ನು ಜನರು ಕನ್ನಡದ ನಟಿ ಎಂದು ಗುರುತಿಸುವುದಿಲ್ಲ. ಬದಲಾಗಿ ದಕ್ಷಿಣ ಭಾರತದ ಹುಡುಗಿ ಎಂದು ಗುರುತಿಸುತ್ತಾರೆ. ಹೀಗಾಗಿ ಎಲ್ಲಾ ನಾಯಕಿಯರಿಗಿಂತ ನನ್ನ ಸ್ಥಾನ ಬೇರೆಯೇ ಇದೆ. ಹಾಗಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಜನರ ನಿರೀಕ್ಷೆ ಕೂಡ ಹಾಗೆ ಇದೆ. ಅವರ ನಿರೀಕ್ಷೆಗೆ ತಕ್ಕಂತೆ ಚಿತ್ರ ನೀಡುತ್ತಾರಂತೆ ಈ ಸೆಕ್ಸಿ ಕ್ವೀನ್ ಸಂಜನಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಂಡ ಹೆಂಡತಿ, ಸಂಜನಾ, ಶ್ಲೋಕ, ಈ ಸಂಜೆ