ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ರಿಮೇಕಾ? ಹಾಗಾದ್ರೆ ನಾನು ನಟಿಸಲ್ಲ': ಶಿವಣ್ಣ (Shivaraj Kumar | Muttu Nammappa | Remake Film)
ಸುದ್ದಿ/ಗಾಸಿಪ್
Feedback Print Bookmark and Share
 
Shivaraj Kumar
MOKSHENDRA
ಶಿವಣ್ಣ ರಿಮೇಕ್ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಗವಾನ್ ಚಿತ್ರದಿಂದ ಅವರು ಹಿಂದೆ ಸರಿದಿದ್ದಾರೆ. ಹೌದು. ಈ ಮೊದಲು ಭಗವಾನ್ ಚಿತ್ರಕ್ಕೆ ಶಿವಣ್ಣ ನಾಯಕ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿತ್ತು. ಆದರೆ ಈ ಚಿತ್ರ ಮಳೆಯಾಳಂ ರಿಮೇಕ್ ಎಂಬ ಕಾರಣದಿಂದ ಚಿತ್ರದಲ್ಲಿ ನಟಿಸಲು ಒಲ್ಲೆ ಎಂದಿದ್ದಾರಂತೆ.

ಅದೆಲ್ಲ ಹಾಗಿರಲಿ. ಇದೀಗ ಮತ್ತೊಂದು ಹೊಸ ಚಿತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಮುತ್ತು ನಮ್ಮಪ್ಪ. ಆದರೆ ಈ ಚಿತ್ರವೂ ರಿಮೇಕ್ ಎಂಬ ಗುಲ್ಲು ಗಾಂಧಿನಗರದಲ್ಲಿ ಹಬ್ಬಿದೆ. ಇದು ಹಾಲಿವುಡ್ಡಿನ ಪರ್ಸ್ಯೂಟ್ ಆಫ್ ಹ್ಯಾಪಿ ಚಿತ್ರದ ರಿಮೇಕ್ ಎಂಬುದು ಚಿತ್ರರಂಗದ ಪಂಡಿತರ ಅನಿಸಿಕೆ.

ಆದರೆ ಇದನ್ನು ರಿಮೇಕ್ ಎಂದು ಒಪ್ಪಿಕೊಳ್ಳಲು ಶಿವಣ್ಣ ಸಿದ್ಧರಿಲ್ಲ. ಇದನ್ನು ರಿಮೇಕ್ ಸಿನಿಮಾ ಎಂದು ಯಾರು ಹೇಳಿದ್ದು. ಆ ಚಿತ್ರದ ಸ್ಪೂರ್ತಿ ಇದೆ ಹೊರತು ಯಥಾವತ್ತು ಅನುಕರಣೆ ಅಲ್ಲ ಎನ್ನುತ್ತಾರೆ ಅವರು. ಚಿತ್ರವನ್ನು ಮಾದೇಶ ಚಿತ್ರದ ನಿರ್ದೇಶಕರಾದ ಶ್ರೀವತ್ಸ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಇದು ರಿಮೇಕ್ ಎಂಬ ಗಾಳಿ ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ. ಒಟ್ಟಾರೆ ಮುತ್ತು ನಮ್ಮಪ್ಪ ಚಿತ್ರದಲ್ಲಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ ಚಿತ್ರದಲ್ಲಿ ನೆರಳು ಕಾಣುವುದರಲ್ಲಿ ಸಂದೇಹವಿಲ್ಲ. ಅಂತೂ ಇದೂ ರೀಮೇಕ್ ಸ್ವಮೇಕ್ ಎಂಬುದು ಇನ್ನೆರಡು ತಿಂಗಳಲ್ಲಿ ಸ್ಪಷ್ಟವಾಗಲಿದೆ. ಅಲ್ಲಿವರೆಗೆ ಕಾಯಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ ಕುಮಾರ್, ಮುತ್ತು ನಮ್ಮಪ್ಪ, ರಿಮೇಕ್ ಚಿತ್ರ