ಹುಬ್ಬಳ್ಳಿಯಲ್ಲಿ ಜೋಶ್ ತಂಡ

ಜೋಶ್ ತಂಡ ಅಂತೂ ಈಗ ಫುಲ್ ಜೋಶ್‌ನಲ್ಲಿದೆ. ನಗರ ಪ್ರದೇಶದ ಜನ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಹೊಸ ಹುಡುಗರ ಚಿತ್ರಕ್ಕೆ ಉತ್ತಮ ಪ್ರೋತ್ಸಾಹ ಸಿಕ್ಕಿರುವ ಬಗ್ಗೆ ಚಿತ್ರತಂಡಕ್ಕೆ ಖುಷಿಯಾಗಿದೆ.ಇತ್ತೀಚೆಗೆ ಹುಬ್ಬಳ್ಳಿಗೆ ಚಿತ್ರದ ಪ್ರಚಾರಕ್ಕೆ ತೆರಳಿದ ಚಿತ್ರತಂಡಕ್ಕೆ ಈ ಅನುಭವ ಆಗಿತ್ತಂತೆ. ನಿರ್ದೇಶಕ ಶಿವಮಣಿ ಜೊತೆ ನಿರ್ಮಾಪಕ ಎಸ್.ವಿ. ಬಾಬು, ಕವಿರಾಜ್ ಹಾಗೂ ನಟ-ನಟಿಯರೂ ಸೇರಿದಂತೆ ಚಿತ್ರತಂಡದ ತಂತ್ರಜ್ಞರು ಹುಬ್ಬಳ್ಳಿಗೆ ತೆರಳಿದ್ದರಂತೆ. ಅಪರೂಪಕ್ಕೆ ತಮ್ಮೂರಿಗೆ ಬರುವ ಕಲಾವಿದರಿಗೆ ಸಿಗುವ ಉತ್ತರ ಜೋಶ್ ತಂಡಕ್ಕೆ ದೊರೆತಿದೆಯಂತೆ. ನಿರ್ದೇಶಕರ ಸಂತೋಷಕ್ಕೆ ಪಾರವೇ ಇಲ್ಲ. ಚಿತ್ರ ಶತದಿನೋತ್ಸವ ಆಚರಿಸುವುದಂತೂ ನಿಶ್ಚಿತ. ಹಳ್ಳಿ ಜನರೂ ಚಿತ್ರ ಮೆಚ್ಚಿಕೊಂಡಿರುವುದು ಸಾರ್ಥಕತೆ ಎನ್ನುವ ಶಿವಮಣಿ, ನೂರನೇ ದಿನದ ಸಂಭ್ರಮದ ಬಳಿಕ ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಡಬ್ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಶುಭವಾಗಲಿ.