ಚಿತ್ರರಂಗದಲ್ಲಿ ಇದೀಗ ನಿರುದ್ಯೋಗಿ ತಲೆ ಎತ್ತುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಹೌದು. ನಿರ್ದೇಶಕ ನಾಗ್ ಹುಣಸೋಡ್ ಅವರ ನಿರುದ್ಯೋಗಿ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದೆ.
ಚಿತ್ರೀಕರಣ ಪ್ರಾರಂಭಗೊಂಡಾಗ ಗಾಂಧಿನಗರದಲ್ಲಿದ್ದ ಇದರ ಪ್ರಚಾರ ಬಳಿಕ ತಣ್ಣಗಾಗಿತ್ತು. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯದೊಂದಿಗೆ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ ನಿರ್ದೇಶಕರು.
ಚಿತ್ರ ಬಿಡುಗಡೆ ಕುರಿತು ಮಾಧ್ಯಮದವರೊಂದಿಗೆ ಹಂಚಿಕೊಳ್ಳಲು ಇತ್ತೀಚೆಗೆ ಗ್ರೀನ್ ಹೌಸ್‌ಗೆ ಬಂದಿತ್ತು ಚಿತ್ರತಂಡ. ಅಲ್ಲಿ ಚಿತ್ರದ ಸಂತೋಷಕ್ಕಿಂತ ನಿರುದ್ಯೋಗ ಸಮಸ್ಯೆಯೇ ಚಿತ್ರತಂಡದವರನ್ನು ಹೆಚ್ಚು ಬಾಧಿಸಿದಂತಿತ್ತು. ಚಿತ್ರವನ್ನು ಚಂದ್ರಕಾಂತ್ ನಿರ್ಮಿಸಿದ್ದಾರೆ. ರಾಜೇಂದ್ರ ಕಾರಂತ್ ನಾಯಕನಾಗಿ ನಟಿಸುತ್ತಿದ್ದಾರೆ.