ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರಲಿದ್ದಾನೆ ಲವ್ ಗುರು (Radhika Pandit | Tarun | Love Guru | Prashanth)
ಸುದ್ದಿ/ಗಾಸಿಪ್
Feedback Print Bookmark and Share
 
Radhika Pandit
MOKSHENDRA
ಲವ್ ಗುರು ಎಂಬ ಪದಕ್ಕೆ ಅರ್ಥ ಹುಡುಕುವುದೇ ಕಷ್ಟ. ಚಿತ್ರದ ಹೆಸರೇ ಹಲವರಿಗೆ ಕನ್ಫ್ಯೂಶನ್. ಏನಾಪ್ಪಾ ಇದರಲ್ಲಿರಬಹುದು ಎಂಬ ಕೆಲವು ಪ್ರಶ್ನೆಗಳು ಹಲವರನ್ನು ಕಾಡಬಹುದು. ಲವ್ ಮಾಡೋದು ಹೇಗೆ ಎಂಬ ಪ್ರಶ್ನೆಯಿರುವವರಂತೂ ಲವ್ ಗುರು ಚಿತ್ರಕ್ಕೆ ಹೋಗಿ ನೋಡಿಕೊಂಡು ಬಂದರೆ ಉತ್ತರ ಸಿಗಬಹುದು ಎಂದು ಲೆಕ್ಕಾಚಾರ ಹಾಕಿರಬಹುದು. ಅಷ್ಟಾಗಲೇ ನಿರ್ದೇಶಕರೇ ಸ್ವತಃ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ನಿರ್ದೇಶಕ ಪ್ರಶಾಂತ್ ಹೇಳುವುದಿಷ್ಟೇ. ಇಲ್ಲಿ ಪ್ರೀತಿ ಪಾಠ ಹೇಳಿಕೊಡುವ ಯಾವುದೇ ಗುರುಗಳಿರುವುದಿಲ್ಲ. ಇದೊಂದು ಭಾವನೆ ವ್ಯಕ್ತಪಡಿಸುವ ಟೈಟಲ್ ಲವ್ ಮಾಡು ಗುರು ಎನ್ನುತ್ತಿವಲ್ಲ. ಹಾಗೆ ನಾವು ಅದೇ ತರಹ ಲವ್ ಗುರು ಎಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ ಪ್ರಶಾಂತ್.

ಚಿತ್ರವನ್ನು ಕಾರ್ಪೋರೇಟ್ ಬದುಕಿನ ಹಿನ್ನೆಲೆಯಲ್ಲಿ ರೂಪಿಸಲಾಗಿದೆಯಂತೆ. ಇದು ನಾಲ್ವರು ಸಾಫ್ಟ್‌ವೇರ್ ಎಂಜಿನಿಯರುಗಳ ಬದುಕಿನ ಕಥೆ. ಚಿತ್ರದಲ್ಲಿ ತರುಣ್ ನಾಯಕ. ಗೆಳೆಯ ಚಿತ್ರದ ಬಳಿಕ ಯಾವುದೇ ನಿರೀಕ್ಷೆಯ ಯಶಸ್ಸು ಗಳಿಸಿಲ್ಲ. ಇವರು ನಟಿಸುತ್ತಿರುವ ಪರಿಚಯ ಚಿತ್ರ ಇನ್ನು ತೆರೆಕಾಣಬೇಕಿದೆ. ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲವ್ ಗುರು, ಪ್ರಶಾಂತ್, ಕನ್ನಡ ಸಿನಿಮಾ, ರಾಧಿಕಾ ಪಂಡಿತ್, ತರುಣ್