ಜೈಲಿನಲ್ಲಿ ಹುಟ್ಟಿದ ಅನಾಥ ಮಗುವನ್ನು ಜೈಲರ್ ತಂದು ಸಾಕುತ್ತಾನೆ. ಆ ಹುಡುಗನಿಗೆ 16 ವರ್ಷವಾಗುತ್ತಲೇ ಕೊಲೆ ಮಾಡಿ ಮತ್ತೆ ಜೈಲು ಸೇರುವ ನಾಯಕ ಬಿಡುಗಡೆಯಾಗಿ ಬಂದ ನಂತರ ಆತನನ್ನು ಸಮಾಜ ಮತ್ತು ತಂದೆ-ತಾಯಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದೇ ಹರ ಚಿತ್ರದ ಒನ್ ಲೈನ್ ಸ್ಟೋರಿ.
ಚಿತ್ರದಲ್ಲಿ ನಾಯಕನಾಗಿ ವಸಂತ್ ಅಭಿನಯಿಸುತ್ತಿದ್ದಾರೆ. ಇವರು ಚಿತ್ರದ ನಿರ್ಮಾಪಕ ತುಳಸಿರಾಂ ಗೆಳೆಯ. ಇದು ತೆಲುಗಿನ ಚಿನ್ನೊಡು ಚಿತ್ರದ ರಿಮೇಕ್. ಈ ಚಿತ್ರವನ್ನು ಕನ್ನಡಕ್ಕೆ ತಂದವರು ಉಲ್ಲಾಸ ಉತ್ಸಾಹ ಚಿತ್ರದ ನಿರ್ದೇಶಕರಾದ ದೇವರಾಜ್ ಪಾಲನ್. ಮೂಲ ಚಿತ್ರದ ಎಳೆ ಮಾತ್ರ ತೆಗೆದುಕೊಂಡು ಪ್ರಾದೇಶಿಕತೆಗೆ ತಕ್ಕಂತೆ ಶೇ.50ರಷ್ಟು ಬದಲಾವಣೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ರೇಣು ಕುಮಾರ್ ಸಂಗೀತ ನಿರ್ದೇಶಕರು. ಚಿತ್ರಕ್ಕೆ ಹಾಡಲು ಸೋನು ನಿಗಮ್ ಅವರನ್ನು ಕರೆತರಲಿದ್ದಾರಂತೆ. ನಾಯಕಿಯಾಗಿ ಕೃಷ್ಣ ಸುಂದರಿ ಪ್ರಜ್ಞಾ ಅಭಿನಯಿಸುತ್ತಿದ್ದಾರೆ.