ಪರಿಚಯ ಚಿತ್ರದ ನಿರ್ದೇಶಕ ಸಂಜಯ್ ತುಂಬಾ ಖುಷಿಯಲ್ಲಿದ್ದಾರೆ. ಇವರ ಖುಷಿಗೆ ಕಾರಣವೇನೆಂದರೆ ಪರಿಚಯ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿ ಎಲ್ಲರ ಬಾಯಲ್ಲೂ ಹರಿದಾಡತೊಡಗಿವೆ.
ಚಿತ್ರದ ಹಾಡುಗಳನ್ನು ಕವಿರಾಜ್ ಮತ್ತು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಕವಿರಾಜ್ ಬರೆದಿರುವ ನಡೆದಾಡುವ ಕಾಮನಬಿಲ್ಲು, ಜಿಗಿಜಿಗಿದು ಮತ್ತು ಕಾಯ್ಕಿಣಿ ಬರೆದಿರುವ ಕುಡಿನೋಟವೇ ಹಾಡುಗಳಂತೂ ಅತ್ಯಂತ ಫೇಮಸ್ ಆಗಿವೆ.
ಸಂಜಯ್, ಚಿತ್ರದ ಹಾಡುಗಳನ್ನು ವಿಶೇಷವಾಗಿ ಮಾಡಬೇಕು. ಬಾಲಿವುಡ್ಡಿನ ಅಪರೂಪ ಗಾಯಕ ಗಾಯಕಿಯರಿಂದ ಹಾಡಿಸಬೇಕು ಎಂದು ಅಂದುಕೊಂಡಿದ್ದರಂತೆ. ಈಗ ಎಲ್ಲಾ ಅಂದುಕೊಂಡಂತೆ ಆಗಿದೆ. ಆಲಿಷಾ ಚಿನಾಯ್, ಬಾಬಾ ಸೆಹ್ಗಲ್, ಶಾನ್ ಮತ್ತು ಶ್ರೇಯಾ ಘೋಶಾಲ್ ಕೂಡ ಹಾಡಿದ್ದಾರಂತೆ.
ಚಿತ್ರದಲ್ಲಿ ನಾಯಕನಾಗಿ ತರುಣ್ ಇದ್ದರೆ ನಾಯಕಿಯಾಗಿ ರೇಖಾ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಆಗಬೇಕಿದೆ. ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆಯಂತೆ. ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ ಅನ್ನುತ್ತಾರೆ ನಿರ್ದೇಶಕ ಸಂಜಯ್. ಚಿತ್ರದ ಹಾಡುಗಳೇನೋ ಈಗಾಗಲೇ ಸುದ್ದಿ ಮಾಡಿವೆ. ಆದರೆ ಚಿತ್ರ ಎಷ್ಟರ ಮಟ್ಟಿಗೆ ಮೂಡಿ ಬಂದಿದೆ ಅನ್ನುವುದಕ್ಕೆ ಮುಂದಿನ ತಿಂಗಳು ಉತ್ತರ ಸಿಕ್ಕಲಿದೆ.