ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಲುಕ್ಕೇ ಬೇರೆ... ಸ್ಟೈಲೇ ಬೇರೆ... (Prashanth Raj | Love Guru | Tarun | Radhika Pandit)
ಸುದ್ದಿ/ಗಾಸಿಪ್
Feedback Print Bookmark and Share
 
Tarun
MOKSHENDRA
ಪ್ರಶಾಂತ್ ರಾಜ್ ನಿರ್ದೇಶನ ಮಾಡುತ್ತಿರುವ ಲವ್ ಗುರು ಚಿತ್ರದಲ್ಲಿ ತರುಣ್ ನಾಯಕ. ಈ ಚಿತ್ರದಲ್ಲಿ ತರುಣ್ ಲುಕ್, ಸ್ಟೈಲ್ ಎಲ್ಲಾ ಬೇರೆಯಂತೆ. ಇದಕ್ಕೆ ತರುಣ್ ಸಹ ತುಂಬಾ ಖುಷಿಯಾಗಿದ್ದಾರಂತೆ. ಒಂದು ಸರಿ ನೋಡಿದರೆ ಅರೆ ಇದು ತರುಣ್ ಹೌದೋ ... ಅಲ್ವೋ... ಅನ್ನೋ ಹಾಗೆ ಕಾಣಿಸಲಿದ್ದಾರಂತೆ.

ನಿರ್ದೇಶಕ ಪ್ರಶಾಂತ್ ರಾಜ್ ಈ ಹಿಂದೆ ಬಾಲಿವುಡ್ಡಿನ ರಾಝ್ ಚಿತ್ರಕ್ಕೆ ಕೆಲಸ ಮಾಡಿದ್ದಾರಂತೆ. ಹಾಗೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ ಜೊತೆ ಕೂಡ ಪಳಗಿದ್ದಾರಂತೆ. ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಮೂರು ಹಾಡುಗಳ ಚಿತ್ರೀಕರಣ ಇನ್ನೂ ಬಾಕಿ ಇದೆಯಂತೆ. ಚಿತ್ರ ನೋಡಿದಾಗ ವಿಶೇಷ ಅನುಭವವಾಗುತ್ತದೆ. ಆ ಬಗ್ಗೆ ಖಂಡಿತ ಸಂಶಯ ಬೇಡ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದಾರೆ. ಜೋಶ್ವಾ ಶ್ರೀಧರ್ ಚಿತ್ರಕ್ಕೆ ಸಂಗೀತ ನೀಡಿದ್ದಾರಂತೆ. ಹಾಡುಗಳು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತದೆಯಂತೆ. ಹಾಗೆ ದೀಲೀಪ್ ರಾಜ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇನ್ನು, ಚಿತ್ರದ ನಿರ್ಮಾಪಕರು ನವೀನ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಶಾಂತ್ ರಾಜ್, ಲವ್ ಗುರು, ತರುಣ್, ರಾಧಿಕಾ ಪಂಡಿತ್