'ಮರಳಿ ಮರೆಯಾಗಿ' ಚಿತ್ರ

ಸೂಪರ್ ಹಿಟ್ ಚಿತ್ರವಾದ ಸವಾರಿಯ ಮರಳಿ ಮರೆಯಾಗಿ ಅನ್ನೋ ಸೂಪರ್ ಹಿಟ್ ಗೀತೆಯನ್ನು ಎಲ್ಲರೂ ಕೇಳಿರುತ್ತೀರಿ ಮತ್ತು ನೋಡಿರುತ್ತೀರಿ. ಈ ಸಾಲೇ ಈಗ ಚಿತ್ರದ ಶೀರ್ಷಿಕೆ. ಚಿತ್ರದ ಹಾಡುಗಳ ಸಾಲನ್ನೇ ಚಿತ್ರದ ಶೀರ್ಷಿಕೆಯಾಗಿ ನಾಮಕರಣ ಮಾಡುವುದು ಈಗಿರುವ ಟ್ರೆಂಡ್. ಇದರ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ನಾಗಾಭರಣ ಅವರ ಗರಡಿಯಲ್ಲಿ ನುರಿತು ನಿರ್ದೇಶನಕ್ಕೆ ಇಳಿದಿರುವ ಮಠ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರಕ್ಕೆ ಮರಳಿ ಮರೆಯಾಗಿ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಶ್ರೀನಗರ ಕಿಟ್ಟಿ ನಾಯಕ. ಹಾಗೆ ಮಡಿಕೇರಿಯ ಬೆಡಗಿಯೊಬ್ಬಳನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟರೊಳಗೆ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆ. ಇನ್ನೂ ಚಿತ್ರಕ್ಕೆ ಸ್ಟೀಫನ್ ಸಂಗೀತ ನಿರ್ದೇಶಕರು. ಈ ಹಿಂದೆ ವಿ.ಮನೋಮೂರ್ತಿ ಶಿಷ್ಯ. ಹಾಗೆ ರಮೇಶ್ ಬಾಬು ತಮ್ಮ ಕ್ಯಾಮೆರಾ ಕರಾಮತ್ತು ತೋರಿಸಲಿದ್ದಾರೆ.