ಈಗ ಶಿವಮೊಗ್ಗದ ಭಟ್ಟರ ಮನೆಯ ಕೆಲಸದಾಳಿನಿಂದ ಹಿಡಿದು ಗಾಂಧಿ ನಗರದ ಗಲ್ಲಿ-ಗಲ್ಲಿಗಳಲ್ಲೂ ವಿಜಯ್ - ಶುಭಾ ಪೂಂಜಾರದ್ದೇ ಮಾತು. ಅವರು ಮದುವೆಯೇ ಆಗಿ ಬಿಟ್ಟಿದ್ದಾರೆಂದು ಹೇಳುತ್ತಾರೆ ಕೆಲವರು. ಮಕ್ಕಳಾಗಲೆಂದು ಶಿವಮೊಗ್ಗದಲ್ಲಿ ಯಾಗ ಮಾಡಿಸಿದರು ಎನ್ನುವವರೂ ಇದ್ದಾರೆ. ಇನ್ನು ಕೆಲವರ ಪ್ರಕಾರ ಇದೆಲ್ಲಾ ಕೇವಲ ಗಾಸಿಪ್.
ಮೂರು ಮಕ್ಕಳ ತಂದೆ ವಿಜಯ್ ಎಲ್ಲಿ, ನಳನಳಿಸುತ್ತಿರುವ ಚಂದಿರನ ತುಂಡು ಶುಭಾ ಪೂಂಜಾ ಎಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಆದರೂ ಗಾಳಿಸುದ್ದಿಗಳು ಅವರಿಬ್ಬರ ಸುತ್ತವೇ ಸುತ್ತುತ್ತಿರುವುದನ್ನು ನೋಡುವಾಗ ಏನೋ ಇದೆ ಎಂದು ಅನ್ನಿಸದಿರದು.
ಅದಕ್ಕೆ ಪುಷ್ಠಿ ಕೊಡುವಂತೆ ಹಲವಾರು ನಿದರ್ಶನಗಳು, ಪ್ರದರ್ಶನಗಳು ಪತ್ರಕರ್ತರಿಗೆದುರಾಗಿವೆ. ಶೂಟಿಂಗ್ ನಂತರದ 'ಕಾರ್ ಶೇಕಿಂಗ್'ನಿಂದ ಹಿಡಿದು ಸುಬ್ರಹ್ಮಣ್ಯದ 'ಶೇಷನಾಗ' ಅತಿಥಿ ಗೃಹದವರೆಗೆ ಅವರಿಬ್ಬರೂ ಹಗಲಿರುಳು ಜತೆಯಾಗಿ ಕಳೆದದ್ದನ್ನು ಕಂಡ ನೂರಾರು ಕಣ್ಣುಗಳಿವೆ.
ನಿಜಕ್ಕೂ ಅಲ್ಲಿ ನಡೆದಿದ್ದೇನು..?
ಬೆಂಗಳೂರಿನಿಂದ ಹೊರಟ ವಿಜಯ್ - ಶುಭಾ ಪೂಂಜಾ ಶಿವಮೊಗ್ಗಕ್ಕೆ ಬಂದಿದ್ದರು. ನಿಜವಾಗಿ ಬಂದದ್ದು ಚಿಕ್ಕಲ್‌ನ ಜ್ಯೋತಿಷಿಯ ಮನೆಗಾದರೂ ಹೇಳಿಕೊಂಡದ್ದು ಮಾತ್ರ 'ತಾಕತ್' ಸಿನಿಮಾದ ಪ್ರಚಾರಕ್ಕೆಂದು.
MOKSHENDRA
ಈ ಜೋಡಿ ಶಿವಮೊಗ್ಗದ ಚಿಕ್ಕಲ್‌ನ ಜ್ಯೋತಿಷಿ ಶಾಮಶಂಕರ್ ಭಟ್ ಮನೆಗೆ ನುಗ್ಗಿದಾಗ ಅಲ್ಲಿಗೂ ದಾಂಗುಡಿಯಿಟ್ಟ ಪತ್ರಕರ್ತರು ಹೋಮದ ಶೂಟಿಂಗ್ ನಡೆಸಲು ಯತ್ನಿಸಿದ್ದಾರೆ. ಆಗ ವಿಜಯ್ ಚಿತ್ರೀಕರಣ ನಡೆಸದಂತೆ ತಡೆದಿದ್ದಾರೆ.
ಆ ಜ್ಯೋತಿಷಿಯ ಮನೆಯಲ್ಲಿ ನಡೆದದ್ದು ಸಾಮಾನ್ಯವಾಗಿ ದಂಪತಿಗಳಷ್ಟೇ ನಡೆಸುವ 'ಲಕ್ಷ್ಮೀ ನರಸಿಂಹ ಹೋಮ'. ಅದನ್ನು ಮಕ್ಕಳಾಗದವರು ಕೂಡ ನಡೆಸುತ್ತಾರೆ ಎಂದೂ ಹೇಳಲಾಗುತ್ತಿರುವುದರಿಂದ ಅವರಿಬ್ಬರಿಗೂ ಈಗಾಗಲೇ ಮದುವೆಯೂ ಆಗಿರಬಹುದು ಎಂಬ ಸಂಶಯಗಳನ್ನು ಹಲವು ಮಾಧ್ಯಮಗಳು ಈಗಾಗಲೇ ತಮ್ಮ ಗಾಸಿಪ್ ಕಾಲಂಗಳಲ್ಲಿ ಬರೆದುಕೊಂಡಿವೆ.
ಜ್ಯೋತಿಷಿ ಮನೆಯಿಂದ ಹೋಮ ಮುಗಿಸಿ ಹೊರ ಬಂದ ವಿಜಯ್‌ರನ್ನು ಪತ್ರಕರ್ತರು ಸುತ್ತುವರಿದಾಗ ಏಕಾಏಕಿ ಸುವರ್ಣ ಚಾನೆಲ್‌ನ ನವೀನ್ ಎಂಬ ಕ್ಯಾಮರಾಮ್ಯಾನ್ ಮೇಲೆ ನಟ ತನ್ನ 'ತಾಕತ್' ಪ್ರದರ್ಶಿಸಿದ್ದಾರೆ. ಒಂದು ಹಂತದಲ್ಲಿ ತೀವ್ರ ಹಲ್ಲೆಯೂ ನಡೆದು ಹೋಗಿದೆ ಎನ್ನಲಾಗಿದೆ.
ಪ್ರಕರಣ ಗಂಭೀರ ರೂಪ ಪಡೆದದ್ದು ಪತ್ರಕರ್ತರು ಮತ್ತು ಕನ್ನಡ ಸಂಘಗಳು ಪ್ರತಿಭಟನೆ ನಡೆಸಿದಾಗ. ಗೂಸಾ ತಿಂದ ಕ್ಯಾಮರಾಮ್ಯಾನ್ ದೂರು ಕೊಡಲು ಪೊಲೀಸ್ ಠಾಣೆಗೆ ಹೋದ ಬಳಿಕ ಪ್ರಕರಣವನ್ನು ತಣ್ಣಗಾಗಿಸಲು ಯತ್ನಿಸಿದ ವಿಜಯ್ ಕ್ಷಮೆ ಯಾಚಿಸಿದ್ದಾರೆ.
MOKSHENDRA
ನಂತರ ಅವರು ಹೊರಟದ್ದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ. ಅಲ್ಲಿ ತುಲಾಭಾರ ನಡೆಸಿ 60 ಕಿಲೋ ಉದ್ದಿನ ಬೇಳೆಯನ್ನೂ ದೇವಳಕ್ಕೆ ಸಮರ್ಪಿಸಿದ್ದಾರೆ. ಆ ದಿನ ಅವರಿಬ್ಬರೂ ಜತೆಯಾಗಿ ಅಲ್ಲಿನ ಲಾಡ್ಜೊಂದರಲ್ಲಿ ಉಳಿದುಕೊಂಡಿದ್ದರು ಎನ್ನುವುದು ಕೂಡ ಕಂಡವರ ಹೇಳಿಕೆ.
ಇವರಿಬ್ಬರು ಹತ್ತಿರವಾದದ್ದು ಯಾವಾಗ?
'ಚಂಡ' ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಅವರಿಬ್ಬರೂ ತೀರಾ 'ಹತ್ತಿರ'ವಾಗಿದ್ದರು ಎಂಬುದನ್ನು ನಿರ್ದೇಶಕ ಎಸ್. ನಾರಾಯಣ್ ಬಹಿರಂಗವಾಗಿಯೇ ದೂರಿಕೊಂಡಿದ್ದರು. 'ಚಂಡ' ಶೂಟಿಂಗ್‌ಗಿಂತ ಕಾರಲ್ಲೇ ಅವರಿಬ್ಬರು 'ಕಾಲಕಳೆದದ್ದು' ಹೆಚ್ಚು ಎಂಬುದೂ ಜನಜನಿತ.
ಆದರೆ ಅವೆಲ್ಲ ನಿಜವಲ್ಲ ಎಂಬುದನ್ನು ಇಬ್ಬರೂ ಆಗಾಗ ಹೇಳುತ್ತಲೇ ಬಂದಿದ್ದಾರೆ. ನಮ್ಮ ನಡುವೆ ಅಂತದ್ದೇನಿಲ್ಲ, ನಾವಿಬ್ಬರೂ ಫ್ರೆಂಡ್ಸ್ ಎನ್ನುವುದು ಅವರಿಬ್ಬರದೂ ವಾದ.
ಚಂಡ ಚಿತ್ರದ ನಂತರ ಈ ಹಾಟ್ ಜೋಡಿಯ ಕಾರಣದಿಂದಲಾದರೂ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ 'ಸ್ಲಮ್ ಬಾಲ'ದಲ್ಲೂ ಜೋಡಿ ನಟನೆ ಕರುಣಿಸಲಾಯಿತು. ಆ ನಂತರದ್ದು 'ತಾಕತ್'. ಇವುಗಳಲ್ಲಿ ಚಂಡ ಬಿಟ್ಟರೆ ಉಳಿದ ಎರಡೂ ಚಿತ್ರಗಳು ತೀರಾ ಮೋಸವೇನೂ ಮಾಡಿಲ್ಲ.
MOKSHENDRA
'ದುನಿಯಾ' ಸೂಪರ್ ಹಿಟ್ ಆಗುತ್ತಿದ್ದಂತೆ ದೊಡ್ಡ ಸ್ಟಾರ್ ಎಂಬ ಹಣೆಪಟ್ಟಿ ಕಟ್ಟಿಕೊಂಡ ಮಾಮೂಲಿ ಸ್ಟಂಟ್ ನಟನೊಬ್ಬನಿಗೆ ಅಹಂಕಾರ ನೆತ್ತಿಗೇರಿದೆ ಎಂದೂ ಹೇಳಲಾಯಿತು. ಆದರೆ ಅತ್ತ ವಿಜಯ್ ಅನಾಥಾಶ್ರಮ, ಅಬಲರಿಗೆ ಸಹಾಯ ಮಾಡುವುದು ಮುಂತಾದ ಸಮಾಜಸೇವೆಯಲ್ಲಿ ತೊಡಗಿಕೊಂಡು ತನ್ನ ಮತ್ತೊಂದು ಮುಖವನ್ನೂ ದರ್ಶನ ಮಾಡಲಾರಂಭಿಸಿದರು.
ಆ ಸಂದರ್ಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ಶುಭಾ ಪೂಂಜಾಳದ್ದಾಗಿತ್ತು. ಮೂಲತಃ ಮಂಗಳೂರಿನ ಕೀರಲು ದನಿಯ ಬಂಟರ ಹುಡುಗಿ ಅವಕಾಶಗಳ ಆಸೆಯಿಂದ ವಿಜಯ್ ತೆಕ್ಕೆಗೆ ಸರಿದಿದ್ದಳು ಎಂದೂ ಹೇಳಲಾಗುತ್ತಿದೆ.
ಮೂಲತಃ ಸ್ತ್ರೀ ಲೋಲುಪನಲ್ಲದಿದ್ದರೂ ಎಲ್ಲಾ ಪಡ್ಡೆಗಳಂತೆ ಚುಡಾಯಿಸುವ ಬುದ್ಧಿ ವಿಜಯ್‌ಗೂ ಇತ್ತು. ಆಗೆಲ್ಲಾ ವಿಜಯ್ ಹೊಟೇಲುಗಳಲ್ಲಿ ಗ್ಲಾಸು ತೊಳೆದವರು, ಎಲೆಕ್ಟ್ರಿಷನ್ ಆಗಿಯೂ ಕೆಲಸ ಮಾಡಿದ್ದಾರೆ. ಹೀಗೆ ತೀರಾ ಬಡತನದಿಂದಲೇ ಮೇಲೆದ್ದು ಬಂದ ವಿಜಯ್‌ಗೆ ಕಷ್ಟದ ಬಗ್ಗೆ ಅರಿವಿದೆ. ಇಂತಹ ಹಲವು 'ಕಲ್ಯಾಣ ಗುಣಗಳು' ಪೂಂಜಾಳಿಗೂ ಇಷ್ಟವಾಗಿರಬಹುದು.
ಆದರೆ ಆದಾಗಲೇ ಮೂರು ಮಕ್ಕಳ ತಂದೆಯಾಗಿರುವ ವಿಜಯ್‌ಗಿದು ಬೇಡವಾಗಿತ್ತು. ಧರ್ಮಪತ್ನಿ ನಾಗರತ್ನ ಅವಿದ್ಯಾವಂತೆಯೆಂಬುದನ್ನು ಹೀಗೆ ದುರುಪಯೋಗ ಮಾಡಬಾರದಿತ್ತು ಎನ್ನುವುದು ಸಮಾಜದ ಕಣ್ಣಲ್ಲಿ ಕಂಡುಬರುವ ಆಕ್ರೋಶ ಮತ್ತು ನೈತಿಕತೆಯ ಪಾಠ.
MOKSHENDRA
ಇದಕ್ಕೆಲ್ಲ ವಿಜಯ್ ತಲೆಕೆಡಿಸಿಕೊಂಡೇ ಇಲ್ಲ. ಜನ ಏನೋ ಮಾತಾಡ್ತಾರೆ. ನಮ್ಮ ನಡುವೆ ಅಂತದ್ದೇನಿಲ್ಲ. ಅದು ಕೇವಲ ವದಂತಿ ಮಾತ್ರ. ಇದು ನನ್ನ ಪತ್ನಿ ನಾಗರತ್ನಳಿಗೂ ಗೊತ್ತು. ನಮ್ಮ ದಾಂಪತ್ಯಕ್ಕೆ ಇಂತಹ ಗಾಳಿಸುದ್ದಿಗಳಿಂದೇನೂ ತೊಂದರೆಯಾಗಿಲ್ಲ. ಇದು ನನ್ನ ಜೀವನ. ನನ್ನ ಖಾಸಗಿ ಜೀವನದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.
ಶುಭಾ ಪೂಂಜಾ ಕೂಡ ಇಂತಹ ಸುದ್ದಿಗಳನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತು. ಆಕೆ ದಿಟ್ಟ ಹುಡುಗಿ. ನಾವಿಬ್ಬರೂ ಕೇವಲ ನಟರಷ್ಟೇ. ಇವೆಲ್ಲಾ ಮಾಧ್ಯಮಗಳ ಸೃಷ್ಟಿ, ನಾವು ಬಲಿಪಶುಗಳು ಎಂಬುದು ವಿಜಯ್ ಸ್ಪಷ್ಟನೆ.
ಚಿತ್ರರಂಗದವರದ್ದು ನಟನೆಯೇ ವೃತ್ತಿಯಾದದ್ದರಿಂದ ಮಾನವ ಸಂಬಂಧಗಳ ಬಗೆಗಿನ ಅವರ ಕಲ್ಪನೆಗಳೇ ಭಿನ್ನವಾಗಿರುತ್ತದೆ. ವಿವಿಧ ವಿಚಾರಗಳ ಬಗ್ಗೆ ವಿಶಾಲವಾಗಿ ಅರಿತುಕೊಳ್ಳುವ ಅವಕಾಶಗಳೂ ಅವರಿಗಿರುತ್ತವೆ. ಇಂತವುಗಳನ್ನೇ ಜನ ತಪ್ಪು ತಿಳಿದುಕೊಂಡಿದ್ದರೂ ಅಚ್ಚರಿಯಿಲ್ಲ ಎನ್ನುವುದು ಸಿನಿಮಾರಂಗದ ಅನುಭವಿಗಳ ಮಾತು.