ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೂ ಬಂತು ಲಿಪ್‌ ಟು ಲಿಪ್ ಕಿಸ್ (Male barali Manju Erali | Parvathi Menon | Vijayalaxmi Singh)
ಸುದ್ದಿ/ಗಾಸಿಪ್
Feedback Print Bookmark and Share
 
Parvathi Menon
MOKSHA
ಭಾರತೀಯ ಸಾಂಪ್ರದಾಯಿಕ ಚಿತ್ರರಂಗದಲ್ಲಿ ಈಗಲೂ ಚಿತ್ರವೊಂದರಲ್ಲಿ ಲಿಪ್ ಟು ಲಿಪ್ ಕಿಸ್ ಅಂದರೆ ಅದೊಂದು ದೊಡ್ಡ ಸುದ್ದಿಯೇ. ಆದರೂ ಬಾಲಿವುಡ್ಡಿನಲ್ಲಿ ಈಗಾಗಲೇ ಈ ಕಿಸ್ಸಿಂಗ್ ಸಹಜವೇ ಆದರೂ, ಚಿತ್ರದಲ್ಲಿ ತುಟಿಗೆ ತುಟಿ ಬೆಸೆವ ಚುಂಬನದ ದೃಶ್ಯವಿದ್ದರೆ ಅದು ಸುದ್ದಿಯಾಗದೆ ಇರದು. ಆದರೂ ಸ್ಥಳೀಯ ಭಾಷಾ ಚಿತ್ರರಂಗ ಇಷ್ಟು ಮುಂದೆ ಹೋಗಿರಲಿಲ್ಲ. ಈಗ ಕನ್ನಡಕ್ಕೂ ಈ ಚುಂಬನ ಕಾಲಿಟ್ಟಿದೆ.

ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಮಳೆ ಬರಲಿ ಮಂಜೂ ಇರಲಿ ಚಿತ್ರ ಈಗಾಗಲೇ ಭಾರೀ ಸುದ್ದಿ ಮಾಡಿದೆ. ಹೆಸರಿಗೆ ತಕ್ಕಂತೆ ಚಿತ್ರದ ಮುಕ್ಕಾಲು ಭಾಗ ಮಳೆಯಲ್ಲೇ ಚಿತ್ರಿಸಲಾಗಿದೆ. ಚಿತ್ರವನ್ನು ರಿಯಲ್ ಆಗಿ ತೋರಿಸಬೇಕು ಎಂಬ ಉದ್ದೇಶದಿಂದ ವಿಜಯಲಕ್ಷ್ಮಿ ಮಳೆಗೋಸ್ಕರ ಕಾದು ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಇಲ್ಲದಿದ್ದರೆ ಚಿತ್ರ ಇಷ್ಟರೊಳಗೆ ಬಿಡುಗಡೆಯಾಗಬೇಕಿತ್ತು.

Parvathi Menon
MOKSHA
ಚಿತ್ರದ ಬಗ್ಗೆ ಮತ್ತೊಂದು ಹೊಸ ಸುದ್ದಿ ಕೇಳಿ ಬರುತ್ತಿದೆ. ಎಲ್ಲವನ್ನೂ ರಿಯಲ್ ಆಗಿಯೇ ಈ ಚಿತ್ರದಲ್ಲಿ ತೋರಿಸಲು ಹೊರಟಿರುವ ವಿಜಯಲಕ್ಷ್ಮಿ ಸಿಂಗ್ ಇದರಲ್ಲಿ ಒಂದು ತುಟಿ ಸೇರಿಸಿ ಚುಂಬಿಸುವ ದೃಶ್ಯವನ್ನೂ ಸೇರಿಸಿದ್ದಾರಂತೆ. ಬಾಲಿವುಡ್ಡಿನಲ್ಲಿ ಇದೀಗ ಸಾಮಾನ್ಯವಾಗುತ್ತಿದ್ದರೂ, ಕನ್ನಡದಲ್ಲಿ ಲಿಪ್ ಟು ಲಿಪ್ ದೃಶ್ಯ ಇರುವ ಚಿತ್ರ ಬರುತ್ತಿದೆ ಅಂದರೆ ಅದೀಗ ದೊಡ್ಡ ಸುದ್ದಿಯೇ ಬಿಡಿ. ಹಾಗೆ ಗಾಂಧಿನಗರಿಯಲ್ಲಿ ಪಸರಿಸಿರುವ ಈ ಚುಂಬನದ ಸುದ್ದಿಯನ್ನು ಚಿತ್ರದ ನಾಯಕಿ ಪಾರ್ವತಿ ಮೆನನ್ ಕೂಡ ಒಪ್ಪಿಕೊಂಡಿದ್ದಾರಂತೆ. ಭಾರತೀಯ ಚಿತ್ರಗಳಿಗೆ ಇದೇನು ಹೊಸತಲ್ಲ. ಯಶಸ್ವಿ ಕ್ಲಾಸಿಕ್ ಚಿತ್ರಗಳಲ್ಲಿ ಇಂಥ ದೃಶ್ಯಗಳು ಇದ್ದೇ ಇರುತ್ತದೆ ಅನ್ನೋ ವಾದ ಪಾರ್ವತಿಯದ್ದು.

ಸಿನಿಮಾಗಳಲ್ಲಿರುವ ಇತರ ದೃಶ್ಯಗಳ್ಯಾವುವೂ ಸುದ್ದಿಯಾಗುವುದಿಲ್ಲ. ಆದರೆ ಲಿಪ್ ಟು ಲಿಪ್ ಕಿಸ್ ಮಾತ್ರ ಏಕೆ ಸುದ್ದಿಯಾಗುತ್ತದೆ. ಚಿತ್ರಕ್ಕೆ ಕಿಸ್ಸಿಂಗ್ ಅಗತ್ಯವಿತ್ತು. ಗಿಮಿಕ್‌ಗಾಗಿ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ತೋರಿಸಲಾಗಿಲ್ಲ. ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಪ್ರತೀ ದೃಶ್ಯಗಳಿಗೂ ಕಾರಣಗಳಿವೆ ಎಂದು ಸಮರ್ಥಿಸಿಕೊಳ್ಳುತ್ತಾರೆ ಪಾರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಳೆ ಬರಲಿ ಮುಂಜೂ ಇರಲಿ, ಪಾರ್ವತಿ ಮೆನನ್, ವಿಜಯಲಕ್ಷ್ಮಿ ಸಿಂಗ್