ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುಧೀರ್ ಕುಡಿ ನಿರ್ದೇಶನದತ್ತ (Sudheer | Nanda | Gubbi | Anaji Nagaraj)
ಸುದ್ದಿ/ಗಾಸಿಪ್
Feedback Print Bookmark and Share
 
ಖಳನಟ ಸುಧೀರ್ ಕುಟುಂಬದ ಕುಡಿಯೊಂದು ಚಿತ್ರ ನಿರ್ದೇಶನದತ್ತ ಹೆಜ್ಜೆ ಇರಿಸಿದ್ದಾರೆ. ಇಲ್ಲಿಯ ತನಕ ನಟನೆಯಲ್ಲಿ ತೊಡಗಿಸಿಕೊಂಡು, ಹಲವು ನಿರ್ದೇಶಕರ ಜತೆ ದುಡಿದಿರುವ ನಂದ, ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ.

ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಅಣಜಿ ನಾಗರಾಜ್ ಹೊತ್ತುಕೊಂಡಿದ್ದಾರೆ. ಸಧ್ಯಕ್ಕೆ ಗೋಲ್ಮಾಲ್ ಹಾಗೂ ಗುಬ್ಬಿ ಚಿತ್ರವನ್ನು ಸದ್ದಿಲ್ಲದೆ ಕೈಗೆತ್ತಿಕೊಂಡಿರುವ ಅಣಜಿ ಕೆಲವೇ ತಿಂಗಳಲ್ಲಿ ಈ ಚಿತ್ರವನ್ನು ಶುರು ಮಾಡಲಿದ್ದಾರೆ.

ಚಿತ್ರಕ್ಕೆ ಪ್ರೇಮ್ ನಾಯಕ. ಚಿತ್ರದ ಕತೆ ಹೇಳುವ ಮುನ್ನವೇ ಪ್ರೇಮ್ ನಾಯಕನಾಗಬೇಕೆಂಬುದು ನಂದ ಅವರ ಬಯಕೆ. ಅದಕ್ಕೆ ಅಣಜಿ ಅಸ್ತು ಅಂದಿದ್ದಾರೆ. ಸದ್ಯ ಪ್ರೇಮ್, ಗೌತಮ್ ಚಿತ್ರದ ಸೋಲಿನಿಂದ ಹೊರಬಂದಿಲ್ಲ. ಜೊತೆಗಾರ ಕೂಡ ಡಬ್ಬದಲ್ಲೇ ಕುಳಿತಿದೆ ಎನ್ನುವ ಬೇಸರ. ಇನ್ನು ಜನುಮಜನುಮದಲ್ಲೂ ಚಿತ್ರ ಬಿಡುಗಡೆ ಯಾವಾಗ ಎಂಬುದು ಗೊತ್ತಿಲ್ಲ. ಅಂತೂ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುಧೀರ್, ನಂದ, ಗುಬ್ಬಿ, ಅಣಜಿ ನಾಗರಾಜ್