ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಳೆ ಹುಡುಗನಿಗೆ ಹುಟ್ಟುಹಬ್ಬದ ಸಂಭ್ರಮ (Ganesh | Golden Star | Shilpa | Mungaru Male)
ಸುದ್ದಿ/ಗಾಸಿಪ್
Feedback Print Bookmark and Share
 
Ganesh, Shilpa
MOKSHA
ಇಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಬೆಳಿಗ್ಗೆ ಪತ್ನಿ ಶಿಲ್ಪಾ, ಪುಟ್ಟ ಮಗಳು ಚಾರಿತ್ರ್ಯಳೊಂದಿಗೆ ಅನಾಥ ಮತ್ತು ಬುದ್ದಿಮಾಂದ್ಯ ಮಕ್ಕಳೊಂದಿಗೆ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಪುಟ್ಟ ಪಾತ್ರದೊಂದಿಗೆ ಹತ್ತು ವರ್ಷಗಳ ಹಿಂದೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಗಣೇಶ್‌ಗೆ ಇಂದು ಚಿತ್ರರಂಗದಲ್ಲಿ ಗೋಲ್ಡನ್‌ ಸ್ಟಾರ್ ಪಟ್ಟ. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಗಣೇಶ್ ಕಾಮಿಡಿ ಟೈಮ್ ಟಿವಿ ಕಾರ್ಯಕ್ರಮದ ಮೂಲಕ ಮನೆಮಾತಾದರು. ಕಾಮಿಡಿಯ ನಂತರ ಗಣೇಶ್‌ ಚೆಲ್ಲಾಟದ ಮೂಲಕ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾದರೂ, ಚಿತ್ರರಂಗದಲ್ಲಿ ಬದುಕು ನೀಡಿದ್ದು, ಮುಂಗಾರು ಮಳೆ ಚಿತ್ರ. ರಾತ್ರಿ ಬೆಳಗಾಗುವುದರೊಳಗೆ ಗಣೇಶ್‌ ಸ್ಟಾರ್ ಪಟ್ಟ ಬಂದಿತ್ತು. ಲಕ್ಷೋಪಲಕ್ಷ ಅಭಿಮಾನಿ ಕನ್ನಡಿಗರು ಹುಟ್ಟಿಕೊಂಡರು.

ಆದರೆ, ಗಣೇಶ್‌ಗೆ ಮದುವೆ ನಂತರ ಹಳೆಯ ಯಶಸ್ಸು ಸಿಕ್ಕಲಿಲ್ಲ. ಕೆಲವು ಚಿತ್ರಗಳು ತೋಪಾದವು. ಆದರೂ ಗಣೇಶ್‌ಗೆ ಆಫರ್‌ಗಳಿಗೇನೂ ಕೊರತೆಯಾಗಿಲ್ಲ. ಇವರ ಉಲ್ಲಾಸ ಉತ್ಸಾಹ ಚಿತ್ರ ಕೆಲವೇ ತಿಂಗಳಲ್ಲಿ ಹೊರಬರಲಿದೆ. ಇದೀಗ ಸ್ವಂತ ಬ್ಯಾನರ್‌ನಡಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ವಿಶ್ ಯೂ ಹ್ಯಾಪಿ ಬರ್ತಡೇ ಗಣೇಶ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಣೇಶ್, ಗೋಲ್ಡನ್ ಸ್ಟಾರ್, ಶಿಲ್ಪಾ, ಮುಂಗಾರು ಮಳೆ