ಗುಜರಾತ್‌ನಲ್ಲಿ ಇಜ್ಜೋಡು

ಹದಿನೈದು ವರ್ಷಗಳ ಸುದೀರ್ಘ ಸಮಯದ ಬಳಿಕ ಮತ್ತೆ ನಿರ್ದೇಶನಕ್ಕಿಳಿದಿರುವ ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ನಿರ್ದೇಶನದ ಇಜ್ಜೋಡು ಚಿತ್ರ ಗುಜರಾತ್‌ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಬಸವಿ ಪದ್ಧತಿಯನ್ನು ಆಧಾರವಾಗಿಟ್ಟುಕೊಂಡು ಇರುವ ಈ ಚಿತ್ರದಲ್ಲಿ ಬಸವಿಯನ್ನು ಬಲವಂತವಾಗಿ ವೇಶ್ಯೆಯಾಗಿಸುವ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಸ್ವಿಜರ್ಲ್ಯಾಂಡಿನ ಸರ್ಕಾರೇತರ ಸಂಸ್ಥೆಯೊಂದು ಬಳ್ಳಾರಿಯಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಚಿತ್ರ ಕೈಗೆತ್ತಿಕೊಳ್ಳಲಾಗಿತ್ತು ಎನ್ನುತ್ತಾರೆ ಸತ್ಯು.ಮುಖ್ಯ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಮೀರಾ ಜಾಸ್ಮಿನ್ ನಟಿಸಿದ್ದಾರೆ. ಇದನ್ನು ರಿಲಯನ್ಸ್ ಬಿಗ್ ಎಂಟರ್ಟೇನ್ಮೆಂಟ್ ನಿರ್ಮಿಸಿದ್ದು, ಇದು ಕನ್ನಡದಲ್ಲಿ ಮಾಡುತ್ತಿರುವ ಮೊದಲ ಚಿತ್ರವಾಗಿದೆ. ಇನ್ನೊಂದು ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಲಿದ್ದಾರೆ.