ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಿಮೇಕ್ ಸಾಕಪ್ಪಾ ಸಾಕು ಎಂದ ಯೋಗೀಶ್ (Duniya | Loose Mada | Yogeesh | Yogi | Dhool)
ಸುದ್ದಿ/ಗಾಸಿಪ್
Feedback Print Bookmark and Share
 
Yogeesh
MOKSHA
ನಟ ಯೋಗೀಶ್ ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಆದರೆ, ವಿಚಿತ್ರವೆಂದರೆ ಇವರು ನಟಿಸಿದ ಹೆಚ್ಚಿನ ಎಲ್ಲಾ ಚಿತ್ರಗಳೂ ರಿಮೇಕ್‌ಗಳೇ. ಹೀಗಾಗಿ ರಿಮೇಕ್ ರಾಜ ಎಂದೇ ಇವರಿಗೆ ಅಡ್ಡ ಹೆಸರು. ಆದರೆ ಈಗ ಅದೇಕೋ ಅವರಿಗೆ ರಿಮೇಕ್ ಇಷ್ಟವಾಗ್ತಿಲ್ವಂತೆ. ರಿಮೇಕ್ ಒಲ್ಲೆ ಎನ್ನುತ್ತಿದ್ದಾರೆ!

ನನಗೆ ರಿಮೇಕ್ ಚಿತ್ರಗಳೇ ಬೇಕು ಎಂದು ಹಠ ಹಿಡಿಯುವುದಿಲ್ಲ. ಇದುವರೆಗೂ ಮೂರು ರಿಮೇಕ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಮುಂದೆ ಸ್ವಮೇಕ್ ಚಿತ್ರಗಳ ಕಡೆ ಗಮನ ಕೊಡಬೇಕು ಎಂದು ನಿರ್ಧರಿಸಿದ್ದೇನೆ ಎನ್ನುತ್ತಾರೆ ಯೋಗೀಶ್. ಎಲ್ಲರೂ ರಿಮೇಕ್ ಚಿತ್ರಗಳಲ್ಲೇ ಯಾಕೆ ನಟಿಸುತ್ತೀಯಾ ಎಂದು ಕೇಳುತ್ತಾರೆ. ನನ್ನ ಇಮೇಜಿಗೆ ತಕ್ಕಂತೆ ಇರುವ ಸಿನಿಮಾಗಳು ಬಂದರೆ ಖಂಡಿತಾ ಸ್ವಮೇಕ್ ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಅಂತಾರೆ ಈ ದುನಿಯಾದ ಮಾದ.

ಸದ್ಯಕ್ಕೆ ಯೋಗೀಶ್ ಧೂಳ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ತಮಿಳಿನ ರಿಮೇಕ್. ಇದರಲ್ಲಿ ಪ್ರಕಾಶ್ ರೈ, ಐಂದ್ರಿತಾ ರೇ ಅಭಿನಯಿಸುತ್ತಿದ್ದಾರೆ. ಇದಾದ ನಂತರ ಹೋಂ ಬ್ಯಾನರ್ ನಿರ್ಮಾಣದ ಚಿತ್ರ ಸೆಟ್ಟೇರಲಿದೆಯಂತೆ. ಆ ಚಿತ್ರ ಪಕ್ಕಾ ಸ್ವಮೇಕ್ ಆಗಿರಲಿದೆ ಎನ್ನುತ್ತಾರೆ ಯೋಗೀಶ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದುನಿಯಾ, ಲೂಸ್ ಮಾದ, ಯೋಗೀಶ್, ಯೋಗಿ, ಧೂಳ್