ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುಂಬೈಯಲ್ಲಿ ಬರ್ತ್‌ಡೇ ಆಚರಿಸಿಕೊಂಡ 'ಗಂಡಹೆಂಡತಿ'ಯ ಸಂಜನಾ (Sanjana | E Sanje | Shloka | Ganda Hendathi)
ಸುದ್ದಿ/ಗಾಸಿಪ್
Feedback Print Bookmark and Share
 
Sanjana
MOKSHA
'ಗಂಡಹೆಂಡತಿ' ಖ್ಯಾತಿಯ ಸಂಜನಾ ಈಗ್ಗೆ ವಾರದ ಹಿಂದೆ ಮುಂಬೈಯಲ್ಲಿ ತನ್ನ ಕುಟುಂಬ ಹಾಗೂ ಗೆಳೆಯರ ಬಳಗದೊಂದಿಗೆ ಗಡದ್ದಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬದ ಖುಷಿ ಒಂದೆಡೆಯಾದರೆ, ಇನ್ನೊಂದೆಡೆ ತನ್ನ ಕೈಯಲ್ಲೀಗ ಮೂರ್ನಾಲ್ಕು ಕನ್ನಡ ಚಿತ್ರಗಳಿರುವ ಸಂತಸ. ಗಂಡಹೆಂಡತಿಯಲ್ಲಿ ತನ್ನೆಲ್ಲ ಮೈಚಳಿಯನ್ನು ಬಿಟ್ಟು ನಟಿಸಿ, ಪ್ರೇಕ್ಷಕರನ್ನು ಚಳಿಯಲ್ಲೂ ಬೆವರಳಿಸಿದರೂ, ಯಾಕೋ ಬೆವರು ಹರಿಸಿ ಕೆಲಸ ಮಾಡಿದ್ದು ಗಿಟ್ಟಲಿಲ್ಲ. ಈಗ ಮತ್ತೆ ಮೂರು ಚಿತ್ರಗಳೊಂದಿಗೆ ಮತ್ತೆ ಗಾಂಧಿನಗರಿಯಲ್ಲಿ ಪ್ರತ್ಯಕ್ಷವಾದ ಸಂತಸ ಆಕೆಯದು.

ಈ ಸಂಜೆ ಚಿತ್ರದಲ್ಲಿ ನಟಿಸಿದ್ದಾಗಿದೆ. ಚಿತ್ರದ ಆಡಿಯೋ ಕ್ಯಾಸೆಟ್ ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆ ಕಾಣಲಿದೆ. ಅದಲ್ಲದೆ, ಶ್ಲೋಕ ಎಂಬ ಹಾರರ್ ಭಯಾನಕ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದಲ್ಲದೆ, ಮೊನ್ನೆ ಮೊನ್ನೆ ನೆನಪಿರಲಿ ಪ್ರೇಮ್ ಜತೆಗೆ ನಾಯಕಿಯಾಗುವ ಅವಕಾಶ ದಕ್ಕಿದ್ದು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದು ಕಣ್ಣರಳಿಸಿ ನಗುತ್ತಾ ಹೇಳುತ್ತಾರೆ ಸಂಜನಾ.

ಇಷ್ಟೇ ಅಲ್ಲ, ಸಂಜನಾ ತನ್ನ 32 ಹಲ್ಲುಗಳೂ ಕೂಡಾ ಕಾಣುವಂತೆ ನಕ್ಕು ಕಣ್ಣರಳಿಸಿ ಸಂತೋಷ ಪಡುವುದಕ್ಕೂ ಕಾರಣವಿದೆ. ಅದೇನೆಂದರೆ, ಸಂಜನಾಗೆ ನಿಧಾನವಾಗಿ ಈಗ ತಮಿಳಿನಲ್ಲೂ ಸಾಕಷ್ಟು ಆಫರ್‌ಗಳು ಬರುತ್ತಿವೆ. ಮಲಯಾಳಂನಿಂದ ಕೂಡಾ. ಆದರೆ, ಸಿಕ್ಕಸಿಕ್ಕ ಚಿತ್ರಗಳಿಗೆಲ್ಲಾ ಸಹಿ ಮಾಡಲ್ಲ. ತುಂಬ ಯೋಚಿಸಿ ನಿರ್ಧಾನ ಕೈಗೊಳ್ಳುತ್ತೇನೆ ಅಂತಾರೆ ಸಂಜನಾ.

ಸಧ್ಯ ಮಲಯಾಳಂ ಚಿತ್ರವೊಂದಕ್ಕೆ ಸಂಜನಾ ಸಹಿ ಮಾಡಿದ್ದಾರೆ. ಆ ಚಿತ್ರ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಗಮನಾರ್ಹ ಸಾಧನೆ ಮಾಡಲಿದೆ ಎಂದೂ ಈಗಲೇ ಆತ್ಮವಿಶ್ವಾಸದ ಭವಿಷ್ಯ ಹೇಳುತ್ತಾರೆ ಸಂಜನಾ. ಆದರೆ, ಆ ಚಿತ್ರದ ಬಗ್ಗೆ ಹೇಳಿ ಅಂದರೆ ಸ್ವಲ್ಪವೂ ಬಾಯಿ ಬಿಡಲೊಲ್ಲದ ಸಂಜನಾ, ಶೀಘ್ರದಲ್ಲೇ ಚಿತ್ರತಂಡವೇ ಅಧಿಕೃತವಾಗಿ ವಿವರ ಪ್ರಕಟಿಸಲಿದೆ. ಅಲ್ಲಿವರೆಗೂ ಕಾಯಿರಿ ಎಂದು ಮಾತು ತಿರುಗಿಸುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಜನಾ, ಗಂಡಹೆಂಡತಿ, ಈ ಸಂಜೆ, ಶ್ಲೋಕ