ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮಿಸಂ ಹಾಡು ಬಿಡುಗಡೆ (Premisam | Hamsalekha | Rathnaja | Ajay gowda)
ಸುದ್ದಿ/ಗಾಸಿಪ್
Feedback Print Bookmark and Share
 
ರತ್ನಜ-ಹಂಸಲೇಖಾ-ಅಜಯ್ ಗೌಡ ಎಂಬ ಹೆಸರಿನ ನಿರ್ದೇಶಕ-ಸಂಗೀತ ನಿರ್ದೇಶಕ-ನಿರ್ಮಾಪಕರ ಕಾಂಬಿನೇಷನ್ ಇರುವ ಪ್ರೇಮಿಸಂ ಚಿತ್ರ ಯಾವ ರೀತಿಯಲ್ಲಿ ಸಂಚಲನೆಯನ್ನು ಸೃಷ್ಟಿಸಲಿದೆ ಎಂಬುದಕ್ಕೆ ಪೂರ್ವಭಾವಿ ಎಂಬಂತೆ ಅದರ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.

ಅಜಯ್ ಗೌಡ ಇದಕ್ಕೆಂದೇ ಸಮಾರಂಭವೊಂದನ್ನು ಆಯೋಜಿಸಿದ್ದರು. ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ್ದು ಆನಂದ್ ಆಡಿಯೋದ ಮಾಲೀಕರಾದ ಮೋಹನ್. ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ ತಮ್ಮ ಪ್ರೀತಿಯ ಶಿಷ್ಯನ ಚಿತ್ರಕ್ಕೆ ತುಂಬಾ ಕಾಳಜಿ ವಹಿಸಿ ಹಾಡು-ಸಂಗೀತವನ್ನು ಮಾಡಿಕೊಟ್ಟಿದ್ದೇನೆ ಎಂದು ಹೇಳುತ್ತಾ ರತ್ನಜರ ಬೆನ್ನು ಚಪ್ಪರಿಸಿದರು.

ಮಾತು ಮುಂದುವರಿಸಿದ ಹಂಸಲೇಖಾ, ಈಗಿನ ಟ್ರೆಂಡ್‌ಗೆ ತಕ್ಕಂತೆ ಹಾಗೂ ಪ್ರೇಮಿಸಂ ಎಂಬ ಶೀರ್ಷಿಕೆಗೆ ಹೊಂದುವಂತೆ ಹಾಡುಗಳನ್ನು ಬರೆದಿದ್ದೇನೆ. ಎಲ್ಲಾ ಚಿತ್ರಗಳಿಗೂ ಕೆಲಸ ಮಾಡುವಂತೆಯೇ ಈ ಚಿತ್ರಕ್ಕೂ ತುಂಬಾ ತಾಳ್ಮೆಯಿಂದ ಕೆಲಸ ಮಾಡಿದ್ದೇನೆ. ಆದರೆ ಎಫರ್ಟ್ ಈ ಚಿತ್ರದಲ್ಲಿ ಒಂದು ಗುಲಗಂಜಿಯಷ್ಟು ಜಾಸ್ತಿ ಎಂಬರ್ಥದ ಮಾತುಗಳನ್ನಾಡಿದರು.

ತಮ್ಮ ನಿರ್ದೇಶನದ ಹೊಂಗನಸು ಚಿತ್ರ ಸೋತಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಅಜಯ್ ಗೌಡರು ಈ ಚಿತ್ರದಲ್ಲಿ ತಮ್ಮ ಕೈಯನ್ನೇನಾದರೂ ಕಟ್ಟಿ ಹಾಕುತ್ತಾರೆಯೇ ಎಂಬ ಭಯವಿತ್ತು. ಆದರೆ ನೆನಪಿರಲಿ ಚಿತ್ರದಂತೆ ಇದನ್ನೂ ಅದ್ದೂರಿಯಾಗಿಯೇ ನಿರ್ಮಿಸೋಣ ಎಂದು ಹುಮ್ಮಸ್ಸು ತುಂಬಿದರು ಎಂದು ಅವರ ಗುಣಗಾನ ಮಾಡಿದರು ನಿರ್ದೇಶಕ ರತ್ನಜ. ಚಿತ್ರದ ನವನಾಯಕರಾದ ವರುಣ್ ಹಾಗೂ ಚೇತನ್ಚಂದ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮಿಸಂ, ಹಂಸಲೇಖಾ, ಧ್ವನಿಸುರುಳಿ ಬಿಡುಗಡೆ, ರತ್ನಜ, ಅಜಯ್ ಗೌಡ